ADVERTISEMENT

ಹುಮನಾಬಾದ್: ಸಾಧಾರಣ ಮಳೆ

ರಸ್ತೆ ಮೇಲೆ ಹರಿದ ಮಳೆ ನೀರು

​ಪ್ರಜಾವಾಣಿ ವಾರ್ತೆ
Published 9 ಮೇ 2020, 9:28 IST
Last Updated 9 ಮೇ 2020, 9:28 IST
ಹುಮನಾಬಾದ್‍ನ ಟೀಚರ್ಸ್‌ ಕಾಲೊನಿಯ ರಸ್ತೆಯ ಮೇಲೆ ನೀರು ನಿಂತಿರುವುದು
ಹುಮನಾಬಾದ್‍ನ ಟೀಚರ್ಸ್‌ ಕಾಲೊನಿಯ ರಸ್ತೆಯ ಮೇಲೆ ನೀರು ನಿಂತಿರುವುದು   

ಹುಮನಾಬಾದ್: ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ಅರ್ಧ ಗಂಟೆ ಗುಡುಗು ಸಹಿತ ಸಾಧಾರಣ ಮಳೆಯಾಯಿತು.

ಗುಡುಗು ಸಹಿತ ಸುರಿದ ಮಳೆಯಿಂದಾಗಿ ಇಲ್ಲಿನ ಪ್ರಮುಖ ರಸ್ತೆಗಳ ಮೇಲೆ ನೀರು ಹರಿಯಿತು. ಇದರಿಂದ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳಿಗೆ ತೊಂದರೆ ಉಂಟಾಯಿತು.

ಪಟ್ಟಣದ ತಾಲ್ಲೂಕು ಪಂಚಾಯಿತಿ, ಹಳೆ ತಹಶೀಲ್ದಾರ್ ಕಚೇರಿ, ಪುರಸಭೆ, ಬಸ್ ನಿಲ್ದಾಣ ಮುಂಭಾಗದ
ಪ್ರಮುಖ ರಸ್ತೆ ಹಾಗೂ ಇಲ್ಲಿನ ಕೋಳಿವಾಡ, ಟೀಚರ್ಸ್‌ ಕಾಲೊನಿ, ಇಂದಿರಾನಗರ, ವಾಂಜ್ರಿ, ಆಶ್ರಯ ಕಾಲೊನಿ, ಗಾಂಧಿನಗರ ಸೇರಿದಂತೆ ವಿವಿಧ ಬಡಾವಣೆಯ ಮುಖ್ಯರಸ್ತೆಗಳ ಮೇಲೆ ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆ
ಉಂಟಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.