ಹುಲಸೂರ: ಕಳೆದ ವಾರ ಸುರಿದ ಭಾರಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ಬೇಲೂರು, ದೇವನಾಳ, ಮಾಚನಾಳ, ಹುಲಸೂರ, ಕೊಂಗಳಿ ಏತ ನೀರಾವರಿ, ತೋರಿ ಬಸವಣ್ಣ ದೇವಸ್ಥಾನ ಹತ್ತಿರ ಅತಿಯಾದ ಮಳೆಯಿಂದ ಹಾನಿಗೊಳಗಾದ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು.
ಬೆಲೆ ಹಾಳಾದ ಬಗ್ಗೆ ರೈತರು ವಿಜಯಸಿಂಗ್ ಎದುರು ರೈತರು ಆಳಲು ತೋಡಿಕೊಂಡರು.
‘ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಪರಿಹಾರ ಕಲಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ವಿಜಯಸಿಂಗ್ ಸೂಚಿಸಿದರು.
ಬೆಳೆ ಹಾನಿಯಿಂದ ಸಮಸ್ಯೆಗೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಬರಲಿದೆ. ಆದಷ್ಟು ಬೇಗ ಪರಿಹಾರ ಕಲಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಸಂತೋಷ ಗುತ್ತೇದಾರ, ಪಪ್ಪು ಉದಾನೆ, ಅಪ್ಪಾಸಾಬ ಮಡಕೆ, ಸುನಿಲ ಪಾಟೀಲ, ಮಹದೇವ ಮಹಾಜನ, ಶಿವಾಜಿ ಪಾಟೀಲ, ಅಶೋಕ್ ಘೋರವಾಡೆ, ಗೋಪಾಲ ಪಾಟೀಲ, ಕಾಶಿನಾಥ ಕಾರಬಾರಿ, ರಾಜಪ್ಪ ಕಣಜ, ಏಜಾಜ್ ಜಹಾಂಗೀರ್, ತ್ರಿಮುಖ ಜೀವಾಯಿ, ಸಚಿನ್ ವಗ್ಗೆ, ಹಮೀದ ಜಹಾಂಗೀರ್, ಸಂಭಾಜಿ ಗವಾರೆ, ರೈತ ಬಸವರಾಜ ಚೌರೆ, ವೀರಪ್ಪ ಚೌರೆ , ಅಧಿಕಾರಿಗಳಾದ ತಹಸಿಲ್ದಾರ್ ಶಿವಾನಂದ ಮೆತ್ರೆ, ತಾಪಂ ಇಓ ಮಹದೇವ ಜಮ್ಮು, ಕಂದಾಯ ನಿರಿಕ್ಷಕ ಶರಣು ಪವಡಶೆಟ್ಟಿ, ಕೃಷಿ ಅಧಿಕಾರಿ ಆಕಾಶ, ಪಿಡಿಒ ರಮೇಶ ಮಿಲಿಂದಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.