ಬೀದರ್: ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಂಗಳವಾರ ರಾತ್ರಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ.
ರಾತ್ರಿ 9.30ರ ಸುಮಾರಿಗೆ ಆರಂಭಗೊಂಡಿದ್ದ ಮಳೆ ತಡರಾತ್ರಿ ವರೆಗೆ ಸುರಿದಿದೆ. ಬುಧವಾರ ಬೆಳಗಿನ ಜಾವ ಕೂಡ ತುಂತುರು ಮಳೆಯಾಗಿದೆ. ಕಾರ್ಮೋಡ ಕವಿದಿದ್ದು, ತಂಗಾಳಿ ಬೀಸುತ್ತಿದೆ. ಚಳಿಯ ಪ್ರಮಾಣ ಹೆಚ್ಚಾಗಿದೆ.
ಬಿರುಸಿನ ಮಳೆಗೆ ನಗರದ ವಿದ್ಯಾನಗರ, ಶಿವನಗರ, ಚೌಬಾರ, ಬಸವನಗರ, ಹಾರೂರಗೇರಿ, ಲಾಡಗೇರಿಯಲ್ಲಿ ಅಪಾರ ನೀರು ಸಂಗ್ರಹಗೊಂಡಿದೆ.
ಜಿಲ್ಲೆಯ ಹುಮನಾಬಾದ್, ಬೀದರ್, ಕಮಲನಗರ, ಔರಾದ್ ತಾಲ್ಲೂಕುಗಳಲ್ಲೂ ಮಳೆಯಾಗಿದೆ. ಇನ್ನೆರೆಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.