ಬಸವಕಲ್ಯಾಣ: ನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಎರಡು ದಿನ ಸಂಭ್ರಮದಿಂದ ನಡೆದ ಜಾತ್ರೆ ಸೋಮವಾರ ರಥೋತ್ಸವದೊಂದಿಗೆ ಸಮಾಪ್ತಿಗೊಂಡಿತು.
ವಿಶೇಷ ಪೂಜೆ, ಅಭಿಷೇಕ ನಡೆಸಿ ಜಾತ್ರೆಗೆ ಚಾಲನೆ ನೀಡಲಾಯಿತು.
ಭಕ್ತರು ನೈವೇದ್ಯ, ತೆಂಗಿನ ಕಾಯಿ ಅರ್ಪಿಸಿದರು. ವಾದ್ಯಮೇಳ ಹಾಗೂ ಬ್ಯಾಂಡ್ ಬಾಜಾದೊಂದಿಗೆ ಪಲ್ಲಕ್ಕಿ ಮತ್ತು ನಂದಿಧ್ವಜಗಳ ಮೆರವಣಿಗೆ ಹಾಗೂ ಮಧ್ಯರಾತ್ರಿ ರಥೋತ್ಸವ ನಡೆಯಿತು.
ಶಾಸಕ ಶರಣು ಸಲಗರ ನಂದಿಧ್ವಜ ಮೆರವಣಿಗೆಗೆ ಚಾಲನೆ ನೀಡಿದರು.
ತಹಶೀಲ್ದಾರ್ ಸಾವಿತ್ರಿ ಸಲಗರ, ಮುಖಂಡರಾದ ಶಶಿಕಾಂತ ದುರ್ಗೆ, ಸಿದ್ದು ಶೇರಿಕಾರ್, ಗುರು ದುರ್ಗೆ, ಮಲ್ಲಿಕಾರ್ಜುನ ಆಗ್ರೆ, ಬಾಬು ಚಪಾತೆ, ಸುನಿಲ, ಚನ್ನಬಸಪ್ಪ ರಾಜಾಪುರೆ, ಸೂರ್ಯಕಾಂತ ನಾಸೆ, ನಾಗೇಶ್, ಸಂತೋಷ, ಸಂಗಮೇಶ ಔಸೆ, ಶ್ರೀಶೈಲ್, ಶಿವಶಂಕರ, ಉಮೇಶ, ಸಂತೋಷ ದುರ್ಗೆ, ಮಂಜು, ನಾಗನಾಥ ಸಂಗೋಳಗೆ, ಸಚಿನ, ವೀರಭದ್ರ ಹಾಗೂ ವಿಜಪ್ಪ ಕಿರುಣಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.