
ಮರಕುಂದಾ(ಜನವಾಡ): ‘ರಾಮಾಯಣ ಗ್ರಂಥವನ್ನು ಎಲ್ಲರೂ ಓದಬೇಕು’ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ತಾಲ್ಲೂಕಿನ ಮರಕುಂದಾ ಗ್ರಾಮದಲ್ಲಿ ಈಚೆಗೆ ನಡೆದ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೀದರ್ ದಕ್ಷಿಣ ಕ್ಷೇತ್ರದಲ್ಲಿ 40 ವಾಲ್ಮೀಕಿ ಭವನ ಕಾಮಗಾರಿಗಳು ಪೂರ್ಣಗೊಂಡಿವೆ. ಗ್ರಾಮದಲ್ಲೂ ವಾಲ್ಮೀಕಿ ಭವನ ನಿರ್ಮಾಣಕ್ಕೆ ₹10 ಲಕ್ಷ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಮಾಸ್ಟರ್ ಮಾತನಾಡಿದರು.
ದತ್ತಾತ್ರೇಯ ಗುರೂಜಿ, ವಾಲ್ಮೀಕಿ ಮಹಾರಾಜ, ರಾಜಶೇಖರ ಗುರೂಜಿ, ಬಕ್ಕಪ್ಪ ಮುತ್ತ್ಯಾ ಸಾನಿಧ್ಯ, ಬಾಳಪ್ಪ ಅರ್ಕಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಅಧ್ಯಕ್ಷ ಜಗನ್ನಾಥ ಜಮಾದಾರ್, ಬೀದರ್ ತಾಲ್ಲೂಕು ಅಧ್ಯಕ್ಷ ಷಣ್ಮುಕಪ್ಪ ವಾಲಿಕಾರ್, ಶರಣಪ್ಪ ಕಾಶೆಂಪುರ, ಸುನೀಲ್ ಕಾಶೆಂಪುರ, ರಾಜಕುಮಾರ ಕರುಣೆ, ಪುಂಡಲೀಕಪ್ಪ ನಿಂಗನವಾಡ್, ಮಲ್ಲಿಕಾರ್ಜುನ ಅಂಬಿಗಾರ, ಭೀಮರಾವ್ ಭೂತಾಳಿ, ಪಾಂಡುರಂಗ ಅಂಬಿಗಾರ, ರೇಖಾ ಹೊಸಮನಿ, ಚಿತ್ರಮ್ಮ ಇದ್ದರು.
ರವಿ ಘಾರ್ಲೆ ನಿರೂಪಿಸಿದರು. ಸಂಜೀವ್ ಯಾಕತಪುರ ಸ್ವಾಗತಿಸಿದರು. ವಿಠ್ಠಲ ಮರಕುಂದಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.