ADVERTISEMENT

ಮಾಲಿನ್ಯ ತಡೆಗೆ ಸಸಿ ನೆಡಿ: ವಿಧಾನ ಪರಿಷತ್‌ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 9:04 IST
Last Updated 6 ಜೂನ್ 2020, 9:04 IST
ಹುಮನಾಬಾದ್‍ನಲ್ಲಿ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚಾರಣೆಯಲ್ಲಿ ವಿಧಾನ ಪರಿಷತ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ ಅವರು ಸಸಿಗೆ ನಿರು ಹಾಕಿದರು
ಹುಮನಾಬಾದ್‍ನಲ್ಲಿ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚಾರಣೆಯಲ್ಲಿ ವಿಧಾನ ಪರಿಷತ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ ಅವರು ಸಸಿಗೆ ನಿರು ಹಾಕಿದರು   

ಹುಮನಾಬಾದ್: ಪರಿಸರ ಸಂರಕ್ಷಣೆ ಮತ್ತು ವಾಯುಮಾಲಿನ್ಯ ತಡೆಗಟ್ಟಲು ಗಿಡ ಬೆಳೆಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಡಾ.ಚಂದ್ರಶೇಖರ್ ಪಾಟೀಲ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ ವತಿಯಿಂದ ಶುಕ್ರವಾರ ನಡೆದ ವಿಶ್ವ ಪರಿಸರ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಲ್ಲಿನ ವಿವಿಧ ಇಲಾಖೆಯವರು, ಸಂಘ, ಸಂಸ್ಥೆಗಳು, ಸಾರ್ವಜನಿಕರು ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ADVERTISEMENT

ಪಟ್ಟಣದಲ್ಲಿ 1,800, ಹಳ್ಳಿಖೇಡ (ಬಿ) 1,900 ಮತ್ತು ರಾಷ್ಟ್ರೀಯ ಹೆದ್ದಾರಿ ನಿಂಬುರನಿಂದ ನಿರ್ಣಾ ರವೆಗೆ 1800 ಸಸಿಗಳು ಸೇರಿದಂತೆ ಒಟ್ಟು 6.8 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದ್ದಾರೆ. ಅಲ್ಲದೆ, ಸಸಿಗಳು ಹಾಳಾಗದಂತೆ ಬೆಳೆಸಿ ಪೋಷಿಸಬೇಕು ಎಂದು ಹೇಳಿದರು.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಅಡಿ ತಾಲ್ಲೂಕಿನ 66 ಸಾವಿರ ರೈತರಿಗೆ ಸಸಿಗಳ ಕಿಟ್‌ ವಿತರಿಸುತ್ತಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ನಾಗಯ್ಯ ಹಿರೇಮಠ, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಗೋವಿಂದ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣ ಅಧಿಕಾರಿ ಬೀರೇಂದ್ರ ಸಿಂಗ್, ಎ.ಸಿ.ಎಫ್ ಎ.ಬಿ.ಪಾಟೀಲ, ಆರ್‌ಎಫ್‌ಒ ರಮೇಶ ಕನಕಟ್ಟ, ಸಂತೋಷ, ಶಾಂತವೀರ ಯಲಾಲ್, ಶಂಕರ ಕನಕ, ಶಿವಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.