ಭಾಲ್ಕಿ: ತಾಲ್ಲೂಕಿನ ನಾವದಗಿ ಗ್ರಾಮದ ರೇವಪ್ಪಯ್ಯಾ ಶಿವಶರಣರ 83ನೇ ಜಾತ್ರಾ ಮಹೋತ್ಸವ ನಿಮಿತ್ತ ವೈಭವದ ರಥೋತ್ಸವ ನಡೆಯಿತು.
ಹುಡಗಿಯ ಕರಿಬಸವೇಶ್ವರ ವಿರಕ್ತ ಮಠದ ಪೀಠಾಧಿಪತಿ ವಿರುಪಾಕ್ಷ ಶಿವಾಚಾರ್ಯರು ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನಂತರ ರಥವನ್ನು ಸದ್ಗುರು ರೇವಪ್ಪಯ್ಯಾ ಮುತ್ಯಾರವರ ಜಯಘೋಷದೊಂದಿಗೆ ವಿಜ್ರಂಭಣೆಯಿಂದ ಎಳೆಯಲಾಯಿತು. ಥೇರ್ ಮೈದಾನದ ದೊಡ್ಡಾಲದ ಮರದವರೆಗೆ ರಥ ಎಳೆಯಯಲಾಯಿತು. ರಥದ ಮೇಲೆ ಭಕ್ತಾದಿಗಳು ಭೆಂಡು, ಬತಾಸೆ ತೂರಿದರು. ದೇವಸ್ಥಾನದ ಸ್ವಾಮೀಜಿ ಶಾಂತವೀರ ಸ್ವಾಮಿ, ಪೂಜಾರಿ ಮಹಾರುದ್ರ ಸ್ವಾಮಿ, ಹಾವಯ್ಯಾ ಸ್ವಾಮಿ, ರೇವಣಯ್ಯಾ ಸ್ವಾಮಿ, ಪ್ರಭಲಿಂಗ ಸ್ವಾಮಿ, ಸಿದ್ದಲಿಂಗ ಸ್ವಾಮಿ, ಶರಣಯ್ಯಾ ಸ್ವಾಮಿ, ಮಾರುತಿಲಿಂಗ ಮುತ್ಯಾ ಬೀರಿ(ಕೆ) ಪೂಜೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.