ADVERTISEMENT

ರುದ್ರಮುನಿ ಜ್ಯೋತಿ ಯಾತ್ರೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 14:14 IST
Last Updated 26 ನವೆಂಬರ್ 2022, 14:14 IST
ಬೀದರ್ ತಾಲ್ಲೂಕಿನ ಚಾಂಬೋಳ್ ಗ್ರಾಮದಲ್ಲಿ ಶರಣ ರುದ್ರಮುನಿ ಜ್ಯೋತಿ ಯಾತ್ರೆಗೆ ರುದ್ರಮುನಿ ಪಟ್ಟದ್ದೇವರು ಚಾಲನೆ ನೀಡಿದರು
ಬೀದರ್ ತಾಲ್ಲೂಕಿನ ಚಾಂಬೋಳ್ ಗ್ರಾಮದಲ್ಲಿ ಶರಣ ರುದ್ರಮುನಿ ಜ್ಯೋತಿ ಯಾತ್ರೆಗೆ ರುದ್ರಮುನಿ ಪಟ್ಟದ್ದೇವರು ಚಾಲನೆ ನೀಡಿದರು   

ಜನವಾಡ: ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ಪ್ರಯುಕ್ತ ಬೀದರ್ ತಾಲ್ಲೂಕಿನ ಚಾಂಬೋಳ್ ಗ್ರಾಮದಿಂದ ಶರಣ ರುದ್ರಮುನಿ ಜ್ಯೋತಿ ಯಾತ್ರೆ ಬಸವಕಲ್ಯಾಣಕ್ಕೆ ಹೊರಟಿತು.

ರುದ್ರಮುನಿ ಪಟ್ಟದ್ದೇವರು ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು.

ಜ್ಯೋತಿ ಯಾತ್ರೆಯು ಜನರಲ್ಲಿ ಆಧ್ಯಾತ್ಮದ ಅರಿವಿನ ಜ್ಯೋತಿ ಬೆಳಗಿಸಲಿದೆ. ಅನುಭವ ಮಂಟಪ ಉತ್ಸವಕ್ಕೆ ಆಮಂತ್ರಣ ನೀಡಲಿದೆ ಎಂದು ಅವರು ಹೇಳಿದರು.

ADVERTISEMENT

ಸಾರ್ವಜನಿಕರು ಅನುಭವ ಮಂಟಪ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಬಸವಾದಿ ಶರಣರ ಚಿಂತನೆಗಳನ್ನು ಅರಿತು, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಪ್ರಮುಖರಾದ ಓಂಕಾರ ಪಾಟೀಲ, ಉಮೇಶ ಬಿರಾದಾರ, ವಿಜಯಕುಮಾರ ಸೋಲಪುರೆ, ರಮೇಶ ಕತ್ತೆ, ಶರಣಪ್ಪ ಪಾಟೀಲ, ಶಂಕರರಾವ್ ಪಾಟೀಲ, ಭೀಮರಾವ್ ಕತ್ತೆ ಹಾಗೂ ಸುಶೀಲಕುಮಾರ ಕುಲಕರ್ಣಿ ಇದ್ದರು. ಚನ್ನಯ್ಯ ಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.