ADVERTISEMENT

ಧರ್ಮ ಮಾರ್ಗದಲ್ಲಿ ಸಾಗಿದರೆ ನೆಮ್ಮದಿ

ಆಣದೂರಿನ ವರಜ್ಯೋತಿ ಭಂತೆ ನುಡಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2021, 15:18 IST
Last Updated 8 ಆಗಸ್ಟ್ 2021, 15:18 IST
ಬ್ಯಾಂಕ್ ಕಾಲೊನಿಯ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ವರ್ಷ ವಾಸದ 12ನೇ ದಿನದ ಕಾರ್ಯಕ್ರಮದಲ್ಲಿ ಆಣದೂರಿನ ವರಜ್ಯೋತಿ ಭಂತೆ ಪ್ರವಚನ ನೀಡಿದರು
ಬ್ಯಾಂಕ್ ಕಾಲೊನಿಯ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ವರ್ಷ ವಾಸದ 12ನೇ ದಿನದ ಕಾರ್ಯಕ್ರಮದಲ್ಲಿ ಆಣದೂರಿನ ವರಜ್ಯೋತಿ ಭಂತೆ ಪ್ರವಚನ ನೀಡಿದರು   

ಬೀದರ್‌: ‘ಧರ್ಮ ಮಾರ್ಗದಲ್ಲಿ ಸಾಗಿದರೆ ಮನುಷ್ಯನಿಗೆ ಸಹಜವಾಗಿಯೇ ಶಾಂತಿ, ನೆಮ್ಮದಿ ದೊರಕುತ್ತದೆ’ ಎಂದು ಆಣದೂರಿನ ವರಜ್ಯೋತಿ ಭಂತೆ ನುಡಿದರು.

ಬ್ಯಾಂಕ್ ಕಾಲೊನಿಯ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ವರ್ಷ ವಾಸದ 12ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಪ್ರವಚನ ನೀಡಿದರು.

‘ಪಂಚೇಂದ್ರಿಯಗಳು ವ್ಯಕ್ತಿಯ ಹಿಡಿತದಲ್ಲಿದ್ದರೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಸಜ್ಜನ ಸಂಗ ಮಾಡಬೇಕು, ದುಷ್ಟರಿಂದ ದೂರವಾಗಬೇಕು, ಗುರು ಹಿರಿಯರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು, ಇದರಿಂದ ಜೀವನ ಸುಖವಾಗುತ್ತದೆ’ ಎಂದರು.

ADVERTISEMENT

ಬಕ್ಕಪ್ಪ ಮೀನಕೇರಿ ಪ್ರಾರ್ಥನೆ ಹಾಡಿದರು. ರಂಗಮ್ಮ ಕಡ್ಡೆ ಸ್ವಾಗತಿಸಿದರು, ಭೀಮಣ್ಣ ಭಾವಿಕಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.