ADVERTISEMENT

ಬೀದರ್‌: ಅವ್ಯವಸ್ಥೆ ಆಗರ ‘ಸಖಿ ಒನ್‌ ಸ್ಟಾಪ್‌ ಸೆಂಟರ್‌’

ಶಶಿಕಾಂತ್ ಎಸ್. ಶೆಂಬೆಳ್ಳಿ
Published 15 ಡಿಸೆಂಬರ್ 2025, 6:16 IST
Last Updated 15 ಡಿಸೆಂಬರ್ 2025, 6:16 IST
<div class="paragraphs"><p>ಸಖಿ ಒನ್‌ ಸ್ಟಾಪ್‌ ಸೆಂಟರ್‌ ಸುತ್ತಲೂ ದಟ್ಟ ಪೊದೆ ಬೆಳೆದಿರುವುದು</p></div>

ಸಖಿ ಒನ್‌ ಸ್ಟಾಪ್‌ ಸೆಂಟರ್‌ ಸುತ್ತಲೂ ದಟ್ಟ ಪೊದೆ ಬೆಳೆದಿರುವುದು

   

ಬೀದರ್‌: ನಗರದ ಬೀದರ್‌ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬ್ರಿಮ್ಸ್‌) ಆವರಣದಲ್ಲಿರುವ ‘ಸಖಿ ಒನ್‌ ಸ್ಟಾಪ್‌ ಸೆಂಟರ್‌’ ಅವ್ಯವಸ್ಥೆಯ ಆಗರವಾಗಿದೆ.

ನೊಂದ ಬಾಲಕಿಯರು ಮತ್ತು ಮಹಿಳೆಯರ ನೆರವಿಗೆ ಧಾವಿಸಲು ‘ಸಖಿ ಒನ್‌ ಸ್ಟಾಪ್‌ ಸೆಂಟರ್‌’ ಅಸ್ತಿತ್ವಕ್ಕೆ ಬಂದಿದೆ. ಆದರೆ, ಸ್ವತಃ ಸೌಕರ್ಯಕ್ಕೆ ಅಂಗಲಾಚುವ ಪರಿಸ್ಥಿತಿ ಇದೆ.

ADVERTISEMENT

ಕೇಂದ್ರದ ಹೊರಗೆ ವಿದ್ಯುತ್‌ ದೀಪಗಳ ವ್ಯವಸ್ಥೆ ಇಲ್ಲ. ರಸ್ತೆಯೆಲ್ಲ ಹಾಳಾಗಿ ಹೋಗಿದೆ. ಮಳೆಗಾಲದಲ್ಲಿ ನೀರು ಸಂಗ್ರಹವಾಗುತ್ತಿದ್ದ ಕಾರಣ ಮಹಿಳೆಯರು ರಸ್ತೆ ದಾಟಲು ಪರದಾಡುವ ಪರಿಸ್ಥಿತಿ ಇತ್ತು. ಈಗ ದೂಳಿನ ಸಮಸ್ಯೆ.

ಇನ್ನು, ಚರಂಡಿ ವ್ಯವಸ್ಥೆ ಕೂಡ ಸರಿ ಇಲ್ಲ. ಇದರ ಪರಿಣಾಮ ಹೊಲಸು ನೀರು ರಸ್ತೆಯ ಮೇಲೆ ಸಂಗ್ರಹವಾಗಿ, ದುರ್ಗಂಧಕ್ಕೆ ಕಾರಣವಾಗಿದೆ. ರಸ್ತೆಯುದ್ದಕ್ಕೂ ದಟ್ಟ ಪೊದೆ ಬೆಳೆದು ನಿಂತಿದೆ. ವಿಷ ಜಂತುಗಳ ತಾಣವಾಗಿ ಮಾರ್ಪಟ್ಟಿದೆ.

ಅಡ್ಮಿನ್‌, ಸಮಾಲೋಚಕರು ಸೇರಿದಂತೆ ಎಂಟು ಜನ ಮಹಿಳಾ ಸಿಬ್ಬಂದಿ ಪಾಳಿ ಪ್ರಕಾರ, ಹಗಲು–ರಾತ್ರಿ ಕೆಲಸ ನಿರ್ವಹಿಸುತ್ತಾರೆ. ಕೌಟುಂಬಿಕ ಕಲಹದ ಪ್ರಕರಣಗಳು ಇಲ್ಲಿಗೆ ಬರುತ್ತವೆ. ಕೆಲವೊಮ್ಮೆ ವಾಗ್ವಾದ, ಜಗಳಗಳು ನಡೆಯುತ್ತವೆ. ಆದರೆ, ಕನಿಷ್ಠ ಒಬ್ಬ ಸೆಕ್ಯೂರಿಟಿ ಗಾರ್ಡ್‌ ಕೂಡ ಇಲ್ಲ.

ಏನಿದರ ಕೆಲಸ: 18 ವರ್ಷದೊಳಗಿನ ಬಾಲಕಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಹಲ್ಲೆ, ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ನೊಂದವರಿಗೆ ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತದೆ. ನೊಂದ ಸ್ಥಿತಿಯಿಂದ ಹೊರತರಲು ಕೌನ್ಸೆಲಿಂಗ್‌ ಸಹ ನಡೆಸಲಾಗುತ್ತದೆ.

ಯಾವ ಕಾರಣದಿಂದ ಅವರ ಮೇಲೆ ದೌರ್ಜನ್ಯ ನಡೆದಿದೆ ಎಂಬುದನ್ನು ಅರಿತುಕೊಂಡು ಅವರಿಗೆ ಕಾನೂನಿನ ನೆರವು, ಪೊಲೀಸ್‌ ರಕ್ಷಣೆ, ತಾತ್ಕಾಲಿಕವಾಗಿ ಇರಲು ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇಷ್ಟೊಂದು ಮಹತ್ವದ ಜವಾಬ್ದಾರಿ ಸಖಿ ಒನ್‌ ಸ್ಟಾಪ್‌ ಸೆಂಟರ್‌ಗೆ ಇದೆ. ಆದರೆ, ಅಲ್ಲಿ ಹೇಳಿಕೊಳ್ಳುವಂತಹ ಸೌಕರ್ಯ ಕಲ್ಪಿಸಿಲ್ಲ ಎಂಬ ದೂರುಗಳಿವೆ.

ವಿದ್ಯುತ್‌ ತಂತಿ ಬಾಕ್ಸ್‌ ಹಾಳಾಗಿದೆ

ಹಾಳಾದ ವಿದ್ಯುತ್‌ ದೀಪ
ಕೆಲವೊಂದು ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸುವಂತೆ ಬ್ರಿಮ್ಸ್‌ ನಿರ್ದೇಶಕರ ಗಮನಕ್ಕೆ ತರಲಾಗಿದೆ. ಅವರು ಸ್ಪಂದಿಸಿದ್ದಾರೆ.ದಿ
–ಸಂಗೀತಾ, ಸಖಿ ಒನ್‌ ಸ್ಟಾಪ್‌ ಸೆಂಟರ್‌ ಸಿಬ್ಬಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.