ADVERTISEMENT

ಬೇಲೂರು: ‘ಹಿಂದುಳಿದ ಮಕ್ಕಳತ್ತ ಗಮನಹರಿಸಿ’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 13:15 IST
Last Updated 22 ಡಿಸೆಂಬರ್ 2021, 13:15 IST

ಬೇಲೂರು (ಹುಲಸೂರ): ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ‘ಸಮುದಾಯದತ್ತ ಶಾಲೆ’ ಕಾರ್ಯಕ್ರಮ ನಡೆಯಿತು.

ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್‌, ಹುಲಸೂರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಸ್‌.ಕಾಂಗೆ, ಶಾಲೆಗೆ ಭೇಟಿ ನೀಡಿ ವರ್ಗವಾರು ಮಕ್ಕಳ ಕಲಿಕೆ ವೀಕ್ಷಣೆ ಮಾಡಿದರು. ಮಕ್ಕಳ ಕಲಿಕಾ ಪ್ರಗತಿ ಕುರಿತು ಶಿಕ್ಷಕರಿಗೆ ಸಲಹೆ ನೀಡಿದರು.

ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್‌ ಸಮುದಾಯದತ್ತ ಶಾಲೆ ಕಾರ್ಯಕ್ರಮದ ಉದ್ದೇಶ ಹಾಗೂ ಅದನ್ನು ಜಾರಿ ಮಾಡುವ ಕುರಿತು ಶಿಕ್ಷಕರಿಗೆ ಮಾರ್ಗ ದರ್ಶನ ನೀಡಿದರು.

ADVERTISEMENT

ಹುಲಸೂರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಎಸ್‌.ಕಾಂಗೆ ಶಿಕ್ಷಕರಿಗೆ ಸಲಹೆ ನೀಡಿ,‘ಮಕ್ಕಳ ಹಾಜರಾತಿ ಹೆಚ್ಚಿಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳತ್ತ ವಿಶೇಷ ಗಮನ ಹರಿಸಬೇಕು’ ಎಂದರು.

ಸಮುದಾಯದತ್ತ ಶಾಲೆಯ ಮಾರ್ಗದರ್ಶಕರಾಗಿ ಬೇಲೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ನಾಗರಡ್ಡಿ, ಹುಲಸೂರ ಸಿಆರ್‌ಪಿ ಶರಣು, ಬಿಆರ್‌ಪಿ ಮಾಧವರಾವ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪಾವ೯ತಿ, ಸಹ ಶಿಕ್ಷಕರಾದ ಭೀಮಾಶಂಕರ ಆದೆಪ್ಪ ಹಾಗೂ ಶಿಕ್ಷಕಿ ಮಿನಾಕ್ಷಿ, ಶಾಲಾ ಸಿಬ್ಬಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.