ADVERTISEMENT

ಕಮರವಾಡಿ: ಶಾಲಾ ಮೇಲುಸ್ತುವಾರಿ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 16:09 IST
Last Updated 29 ಜುಲೈ 2024, 16:09 IST
ವಾಡಿ ಸಮೀಪದ ಕಮರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್‌ಡಿಎಂಸಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ-ಉಪಾಧ್ಯಕ್ಷರನ್ನು ಗ್ರಾಮಸ್ಥರು ಅಭಿನಂದಿಸಿದರು
ವಾಡಿ ಸಮೀಪದ ಕಮರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎಸ್‌ಡಿಎಂಸಿಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ-ಉಪಾಧ್ಯಕ್ಷರನ್ನು ಗ್ರಾಮಸ್ಥರು ಅಭಿನಂದಿಸಿದರು   

ವಾಡಿ: ಸಮೀಪದ ಕಮರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಸಮಿತಿ ರಚಿಸಲಾಯಿತು.

ಗ್ರಾಮದ ಮುಖಂಡರ ನೇತೃತ್ವದಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ಮಹೆಬೂಬಿ ಖದೀರ್ ಮುಲ್ಲಾ ಅಧ್ಯಕ್ಷೆಯಾಗಿ ಬಸವರಾಜ ಸುಲೆಪೇಠ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕಿಶಾನ್‌ ಚವ್ಹಾಣ, ಲಕ್ಷ್ಮಣ ಅಮಕಾರ, ಬಸವರಾಜ ಮಾಂಗ, ಭೀಮರಾಯ ಸೂಲಹಳ್ಳಿ, ವಿಶ್ವಾರಾಧ್ಯ ಕುಸನೂರು, ಬಸವರಾಜ ಮಡಿವಾಳ, ಮಲ್ಲಿಕಾರ್ಜುನ, ಸಿದ್ದಪ್ಪ ತಳವಾರ, ಖಾಸೀಂ ಸಾಬ್, ಶರಣಯ್ಯ ಗುತ್ತೇದಾರ, ನಾಗರಾಜ ತಳವಾರ, ಮೋನಪ್ಪ ಪೂಜಾರಿ, ಶರಣಪ್ಪ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ADVERTISEMENT

ಮುಖ್ಯಶಿಕ್ಷಕಿ ಮಂಜುಳಾ ಎಂ.ಆರ್ ಮಾತನಾಡಿ, ‘ಎಸ್‌ಡಿಎಂಸಿ ಸದಸ್ಯರು ಶಾಲೆ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು’ ಎಂದು ಹೇಳಿದರು.

ಮುಖಂಡ ಭೀಮಾಶಂಕರ ಇಂದೂರ ಮಾತನಾಡಿದರು. ಗ್ರಾ.ಪಂ ಪಿಡಿಒ ಹಣಮಂತರಾಯ ಹೊಸಮನಿ, ಸದಸ್ಯರಾದ ರಹೇಮಾನಸಾಬ್ ಬಾಂಬೆ, ಪ್ರೇಮನಾಥ ದ್ಯಾವಕರ್, ಢಾಕು ರಾಠೋಡ, ದೇವಪ್ಪಗೌಡ ಪೊ. ಪಾಟೀಲ, ಶಿವಶರಣಪ್ಪ ಯರಗಲ, ಶಿವಶರಣಪ್ಪ ಶಿರವಾಳ, ಸೈಯದ್ ಮುಸ್ತಫಾ ಹುಸೇನ್, ಬಸವರಾಜಗೌಡ ದೇಶಮುಖ, ಹರಿಸಿಂಗ್ ಚವ್ಹಾಣ, ಮಲ್ಲಿಕಾರ್ಜುನ ಮಾಲಿ ಪಾಟೀಲ, ಡಾಕುಗೌಡ ಕುಸನೂರು, ಮಹೆಬೂಬ್ ಮುಲ್ಲಾ, ಜಿಲಾನಿ ಮುಲ್ಲಾ, ಸಿದ್ದಣ್ಣ ಪೂಜಾರಿ, ಮಹೆಬೂಬ್ ಬಾಂಬೆ, ರಮೇಶ ದೇವಾಪುರ, ಬಾಬುರಾವ ಹಣ್ಣಿಕೇರಾ, ಶಿವಪ್ಪ ಸೂಲಹಳ್ಳಿ, ಸಹ ಶಿಕ್ಷಕ ವೀರಣ್ಣ ಪಂಚಾಳ, ಶೈಲಾಶ್ರೀ ಕೌಲಗಾ ಸೇರಿದಂತೆ ಹಲವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.