ADVERTISEMENT

ಬಸವಕಲ್ಯಾಣ | ‘ಶರಣರ ತ್ಯಾಗ, ಬಲಿದಾನದಿಂದ ವಚನಗಳ ರಕ್ಷಣೆ’

ಶರಣ ವಿಜಯೋತ್ಸವದಲ್ಲಿ ಅಕ್ಕ ಗಂಗಾಂಬಿಕಾ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 4:57 IST
Last Updated 27 ಸೆಪ್ಟೆಂಬರ್ 2025, 4:57 IST
ಬಸವಕಲ್ಯಾಣದಲ್ಲಿ ಗುರುವಾರ ನಡೆದ ಶರಣ ವಿಜಯೋತ್ಸವದಲ್ಲಿ ನಡೆದ ಗೋಷ್ಠಿಯ ಉದ್ಘಾಟನೆಯಲ್ಲಿ ಅಕ್ಕ ಗಂಗಾಂಬಿಕಾ ದೀಪ ಬೆಳಗಿಸಿದರು. ಮಾಜಿ ಸೈನಿಕರು ಉಪಸ್ಥಿತರಿದ್ದರು
ಬಸವಕಲ್ಯಾಣದಲ್ಲಿ ಗುರುವಾರ ನಡೆದ ಶರಣ ವಿಜಯೋತ್ಸವದಲ್ಲಿ ನಡೆದ ಗೋಷ್ಠಿಯ ಉದ್ಘಾಟನೆಯಲ್ಲಿ ಅಕ್ಕ ಗಂಗಾಂಬಿಕಾ ದೀಪ ಬೆಳಗಿಸಿದರು. ಮಾಜಿ ಸೈನಿಕರು ಉಪಸ್ಥಿತರಿದ್ದರು   

ಬಸವಕಲ್ಯಾಣ: ‘ಕಲ್ಯಾಣ ಕ್ರಾಂತಿಯ ವೇಳೆ ನಾಶವಾಗುತ್ತಿದ್ದ ವಚನಗಳನ್ನು ಹಲವು ಶರಣರು ತ್ಯಾಗ, ಬಲಿದಾನಗೈದು ಸಂರಕ್ಷಿಸಿದ್ದಾರೆ’ ಎಂದು ಹರಳಯ್ಯ ಪೀಠಾಧ್ಯಕ್ಷೆ ಅಕ್ಕಗಂಗಾಂಬಿಕಾ ಹೇಳಿದ್ದಾರೆ.

ನಗರದ ಹರಳಯ್ಯ ಗವಿಯಲ್ಲಿ ಗುರುವಾರ ನಡೆದ ಶರಣ ವಿಜಯೋತ್ಸವದ ಮಾಚಿದೇವ-ಮಲ್ಲಿಬೊಮ್ಮ ವೀರ ಸೈನಿಕರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಈಗಿನ ಸೈನಿಕರಿಂದ ದೇಶ ಸಂರಕ್ಷಿಸುವ ಮಹತ್ವದ ಕಾರ್ಯ ನಡೆಯುತ್ತದೆ. ಧರ್ಮದ ಜಾಗೃತಿಗೆ ಶರಣರ ಸತ್ಕಾರ್ಯದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಯುವಕರಲ್ಲಿ ದೇಶಾಭಿಮಾನ ಮೂಡಿಸುವುದಕ್ಕೆ ಸೈನಿಕರ ಸಾಹಸದ ಪ್ರಸಂಗ ಹಾಗೂ ತ್ಯಾಗ ಬಲಿದಾನದ ಕತೆಗಳನ್ನು ಹೇಳಬೇಕಾಗಿದೆ’ ಎಂದು ಹೇಳಿದರು.

ADVERTISEMENT

ನಿವೃತ್ತ ಯೋಧ ನವೀನ ನಾಗಪ್ಪ ಮಾತನಾಡಿ, ‘ದೇಶಕ್ಕೆ ಆಪತ್ತು ಬಂದಾಗ ಸೈನಿಕರು ಹೋರಾಡುವುದಕ್ಕೆ ಸದಾ ಸಿದ್ಧರಾಗಿರುತ್ತಾರೆ. ಇತರರ ಒಳಿತಿಗಾಗಿ ಜೀವನ ನಡೆಸುವುದೇ ನಿಜವಾದ ಬಾಳು’ ಎಂದು ಹೇಳಿದರು.

ನಗರಸಭೆ ಆಯುಕ್ತ ರಾಜೀವ ಬಣಕಾರ, ಗಾಯತ್ರಿ ತಾಯಿ, ಶಿವಕುಮಾರ ಬಿರಾದಾರ, ಸಂಗಮೇಶ ತೊಗರಖೇಡೆ ಮಾತನಾಡಿದರು.

ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಲದ್ದೆ, ತಾಲ್ಲೂಕು ಘಟಕದ ಅಧ್ಯಕ್ಷ ಬಾಬುರಾವ ಗೋರ್ಟೆ, ಉಪಾಧ್ಯಕ್ಷ ಮಲ್ಲಪ್ಪ ಬಾಗೇವಾಡಿ, ಪ್ರಕಾಶ ನೇತೆ, ಸಿದ್ರಾಮಪ್ಪ ಬೇಲೂರೆ, ರಮೇಶ ಪಾಟೀಲ, ಪ್ರಕಾಶ ಸೋನಾರೆ, ಜಗನ್ನಾಥ ಡಿಗ್ಗಿ, ಪಂಡಿತ ಸೂರ್ಯವಂಶಿ, ವಿಠಲ ಕಾದೇಪುರೆ, ಗಂಗಾಂಧರ ಕುಲಕರ್ಣಿ, ವಿ.ಕೆ. ತೆಲಂಗ, ಲಿಂಗರಾಜ ಶಾಶೆಟ್ಟೆ, ಸಿದ್ದಣ್ಣ ಮರ್ಪಳ್ಳೆ, ಜಗದೇವಿ ಹೊಳಕುಂದೆ ಉಪಸ್ಥಿತರಿದ್ದರು.

ರಾಧಾ ಎವಲೆ ಸಂಗೀತ ಪ್ರಸ್ತುತಪಡಿಸಿದರು. ಸೃಷ್ಟಿ ಮತ್ತು ಸಂಗಡಿಗರು ಆಪರೇಷನ್ ಸಿಂಧೂರ ರೂಪಕ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.