ADVERTISEMENT

ಮಾಸಿಕ ಶರಣ ಸಂಗಮ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 14:47 IST
Last Updated 21 ಜೂನ್ 2025, 14:47 IST

ಭಾಲ್ಕಿ: ಇಲ್ಲಿಯ ಚನ್ನಬಸವಾಶ್ರಮದಲ್ಲಿ ಭಾನುವಾರ ಸಂಜೆ 5.30ಕ್ಕೆ ಹಿರೇಮಠದ ಹಿರಿಯ ಸ್ವಾಮೀಜಿ ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ 312ನೇ ಮಾಸಿಕ ಶರಣ ಸಂಗಮ, ಕುರುಬ ಗೊಲ್ಲಾಳೇಶ್ವರ ಜಯಂತಿ ಕಾರ್ಯಕ್ರಮ ನಡೆಯಲಿದೆ.

ಪ್ರಮುಖರಾದ ನಿಂಗಣ್ಣ ಎಸ್. ಗಚ್ಚಿನಮನಿ, ಶಿವಶರಣಪ್ಪ ಛತ್ರೆ, ಶಿವರಾಜ ಮಲ್ಲೇಶಿ, ಬಾಲಾಜಿ ಖೇಡಕರ್, ಪಂಢರಿ ಮೇತ್ರೆ, ಸಂಜು ಗುಂಜರಗೆ, ಶ್ರೀದೇವಿ ಶರಣಪ್ಪ ಬಿರಾದಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕನ್ನಡ ಝೀ ವಾಹಿನಿಯ ಸರಿಗಮಪ ಸೀಜನ್ 21ರ ವಿಜೇತೆ ಶಿವಾನಿ ಶಿವದಾಸ, ಶಾಂತಿ ಪ್ರಶಸ್ತಿ ಪುರಸ್ಕೃತ ಡಾ.ಮನ್ಮಥ ಢೋಳೆ, ಶಿವಲಿಂಗ ಹೇಡೆ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಗುವುದು. ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.