ಬಸವಕಲ್ಯಾಣ: ನಗರದ ತ್ರಿಪುರಾಂತ ಘನಲಿಂಗ ರುದ್ರಮುನಿ ಗವಿಮಠದಲ್ಲಿ ಭಾನುವಾರ ಶಿರಸಿಯಲ್ಲಿನ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನ ವಹಿಸಿದ್ದ ಹಾಗೂ ಚುಟುಕು ಪರಿಷತ್ತಿನ ಸಾಹಿತ್ಯ ಸಿಂಚನ ಪ್ರಶಸ್ತಿ ಪಡೆದಿರುವ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಅಭಿನಂದನಾ ಸಮಾರಂಭ ಜರುಗಿತು.
ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ, ಗವಿಮಠ ಟ್ರಸ್ಟ್ ಹಾಗೂ ಭಕ್ತರ ಪರವಾಗಿ ಶ್ರೀಗಳಿಗೆ ಸನ್ಮಾನಪತ್ರ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಇಲ್ಲಿ ಘನಲಿಂಗ ರುದ್ರಮುನಿಯವರ ಕರ್ತೃ ಗದ್ದುಗೆ ಇದ್ದು ಅವರು 12ನೇ ಶತಮಾನದ ವಚನಕಾರ ಆಗಿದ್ದರು. ಅನೇಕ ಶರಣರಿಗೆ ದೀಕ್ಷೆ ನೀಡಿದ್ದರು. ನನ್ನಿಂದ ವಿವಿಧ ಕಾರ್ಯಗಳು ನಡೆಯುವಂತಾಗಲು ಅವರೇ ನನಗೆ ಪ್ರೇರಣೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತಲಿಂಗ ಮಠಪತಿ ಮಾತನಾಡಿ, ‘ಶಿವಾಚಾರ್ಯರು ಕೈಗೊಂಡಿರುವ ಸಾಮಾಜಿಕ, ಧಾರ್ಮಿಕ ಮತ್ತು ಸಾಹಿತ್ಯಕ ಕಾರ್ಯ ಅಮೋಘವಾಗಿದೆ’ ಎಂದರು.
ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಅಧ್ಯಕ್ಷ ಬಸವರಾಜ ಸ್ವಾಮಿ, ನಿವೃತ್ತ ಪ್ರಾಧ್ಯಾಪಕ ವೆಂಕಣ್ಣ ದೊಣ್ಣೆಗೌಡ, ಮಲ್ಲಿಕಾರ್ಜುನ ಆಲಗೂಡೆ, ರಮೇಶ ರಾಜೋಳೆ, ರಾಕೇಶ ಪುರವಂತ ಮಾತನಾಡಿದರು.
ಸದ್ಬೋಧನಾ ಸಂಸ್ಥೆ ಮಹಿಳಾ ಘಟಕದ ಅಧ್ಯಕ್ಷೆ ಕಲ್ಪನಾ ಶೀಲವಂತ ಸನ್ಮಾನಪತ್ರ ಓದಿದರು.
ಗವಿಮಠ ಟ್ರಸ್ಟ್ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ, ಬಸವಂತಪ್ಪ ಲವಾರೆ, ಪ್ರೊ.ಸೂರ್ಯಕಾಂತ ಶೀಲವಂತ, ಸದಾನಂದ ಕಣಜೆ, ದಯಾನಂದ ಶೀಲವಂತ, ರೇವಣಯ್ಯ ಸ್ವಾಮಿ, ಬಾಬು ಸ್ವಾಮಿ, ಶಿವಲೀಲಾ ಮಠಪತಿ, ಸವಿತಾ ಸ್ವಾಮಿ, ಸಂಗೀತಾ ಸುನಿಲ ಪಾಟೀಲ, ಮಹಾನಂದಾ ರಾಕೇಶ ಪುರವಂತ, ಸರೋಜನಿ ಹಿರೇಮಠ, ಕಲಾವತಿ ಸ್ವಾಮಿ ಉಪಸ್ಥಿತರಿದ್ದರು.
ಪ್ರೊ.ರುದ್ರೇಶ್ವರ ಗೋರ್ಟಾ, ವಿವೇಕ ವಸ್ತ್ರದ ಸಂಗೀತ ಪ್ರಸ್ತುತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.