ಬೀದರ್: ಜಿಲ್ಲಾಡಳಿತದ ವತಿಯಿಂದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೋತಿಲಾಲ್ ಲಮಾಣಿ ಅವರು ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಮಾಣಿಕರಾವ್ ವಾಡೇಕರ್ ಮಾತನಾಡಿ, ’ಸಿದ್ಧರಾಮೇಶ್ವರರು ಇಷ್ಟಲಿಂಗ ಯೋಗ ಸಾಧನೆಗೈದು ಶಿವಯೋಗಿಯಾದವರು’ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಬೀದರ್ ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ಪುಂಡಲೀಕ ನಿಂಗದಳ್ಳಿಕರ್, ಸದಸ್ಯರಾದ ಮಾರುತಿ ಭೋವಿ, ಗಣೇಶ ಭೋವಿ, ಮಾಣಿಕ ಪವಾರ, ರಾಮಲು ರಾಮಲೆ, ಭಜರಂಗ ಪವಾರ, ಸುರೇಶ ಭೋವಿ, ಲಕ್ಷ್ಮಣ ಜನವಾಡ, ರಾಮು ನಿಜಾಮಪುರ, ನಾಗೇಶ ನಿಜಾಮಪುರ, ಚಂದು ಬೀದರ್, ಚಂದ್ರಪ್ಪ ಮಳಚಾಪಪುರ, ರವಿ ಚೊಂಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.