
ಬೀದರ್: ನಗರದ ಗ್ಲೋಬಲ್ ಸೈನಿಕ ಅಕಾಡೆಮಿ ಶಾಲೆಯಿಂದ ಭಾನುವಾರ ಸಿಂಧೂರ ರಕ್ಷಕ ರನ್ ಮ್ಯಾರಾಥಾನ್ ಆಯೋಜಿಸಲಾಗಿತ್ತು.
3,6 ಹಾಗೂ 10 ಕಿ.ಮೀ ಓಟದ ಸ್ಪರ್ಧೆಯಲ್ಲಿ ಒಟ್ಟು 6 ಸಾವಿರಕ್ಕೂ ಹೆಚ್ಚು ಜನ ಹೆಸರು ನೋಂದಣಿ ಮಾಡಿಸಿಕೊಂಡು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರೆ, ಕ್ಯಾಪ್ಟನ್ ಭೀಮ್ ಸಿಂಗ್ ಅವರು ಮ್ಯಾರಾಥಾನ್‌ಗೆ ಚಾಲನೆ ನೀಡಿದರು.
10 ಕಿ.ಮೀ ಪುರುಷರ ವಿಭಾಗದಲ್ಲಿ ಶಿವಾನಂದ ಪ್ರಥಮ, ಈರಪ್ಪ ದ್ವಿತೀಯ ಹಾಗೂ ಬಸವರಾಜ ತೃತೀಯ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಶಾಹೀನ್ ಪ್ರಥಮ, ಸ್ವಪ್ನಾ ದ್ವಿತೀಯ ಹಾಗೂ ಅಂಜಲಿ ತೃತೀಯ ಸ್ಥಾನ ಪಡೆದರು.
6 ಕಿ.ಮೀ ಪುರುಷರ ವಿಭಾಗದಲ್ಲಿ ಮನು ಸಾಗರ್ ಪ್ರಥಮ, ಪ್ರಶಾಂತ ದ್ವಿತೀಯ ಹಾಗೂ ನಿತಿನ್ ತೃತೀಯ, ಮಹಿಳೆಯರ ವಿಭಾಗದಲ್ಲಿ ಸೋನು ಪ್ರಥಮ, ಬೇಬಿ ತೃತೀಯ ಹಾಗೂ ನಿರೀಕ್ಷಾ ತೃತೀಯ ಸ್ಥಾನ ಗಳಿಸಿದರು.
3 ಕಿ.ಮೀ ಪುರುಷರ ವಿಭಾಗದಲ್ಲಿ ಭಾಗವತ ಪ್ರಥಮ, ಎಂ.ಡಿ. ಇಸ್ಮಾಯಿಲ್ ದ್ವಿತೀಯ ಹಾಗೂ ಕರಣ್ ತೃತೀಯ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಇರಾ ವಾಂಖೆಡೆ ಪ್ರಥಮ, ಖುಷಿ ದ್ವಿತೀಯ ಹಾಗೂ ಜಗದೇವಿ ತೃತೀಯ ಸ್ಥಾನಕ್ಕೆ ಖುಷಿಪಟ್ಟರು.
10 ಕಿ.ಮೀ ಓಟದಲ್ಲಿ ₹10 ಸಾವಿರ ನಗದು ಪ್ರಥಮ, ₹8 ಸಾವಿರ ಹಾಗೂ ₹5 ಸಾವಿರ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವರಿಗೆ ಕಪ್, ಪದಕ ನೀಡಲಾಯಿತು.
ನಿರ್ದೇಶಕರಾದ ರಮೇಶ ಪಾಟೀಲ್, ಆರ್.ಜಿ. ಮಠಪತಿ, ಡಾ. ರಘು ಕೃಷ್ಣಮೂರ್ತಿ, ಸುಮೀತ್ ಸಿಂದೊಲ್, ಕೆ.ಕೆ. ಅಟ್ಟಲ್, ಶ್ರೀನಿವಾಸರಾಜು ಸಾಗಿ, ಡಾ. ಶಿಲ್ಪಾ ಬುಲ್ಲಾ, ಡಾ. ಶರಣ್ ಬುಳ್ಳಾ, ಶಾಲೆಯ ಪ್ರಾಂಶುಪಾಲ ಸಮೋದ್ ಮೋಹನನ, ಮುಖ್ಯ ಶಿಕ್ಷಕಿ ಜ್ಯೋತಿ ರಾಗಾ, ಪಿಆರ್‌ಒ ಕಾರಂಜಿ ಸ್ವಾಮಿ, ಸುಬೇದಾರ್ ಮಡೆಪ್ಪ, ಸುಬೇದಾರ್ ಧನರಾಜ್, ಸುಬೇದಾರ್ ರಾಮಜಿ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.