ಬಸವಕಲ್ಯಾಣ: ‘ನಮ್ಮ ಪಕ್ಷದ ಸರ್ಕಾರ ಇರುವ ಕಾರಣ ಸಂಬಂಧಿತರಿಗೆ ಭೇಟಿಯಾಗಿ ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕಾಗಿ ನಿವೇಶನ ಮಂಜೂರು ಮಾಡಿಸುತ್ತೇನೆ’ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಭರವಸೆ ನೀಡಿದರು.
ನಗರದ ಯಾತ್ರಿ ನಿವಾಸದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಅನುಭವ ಮಂಟಪದ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಸಕಾರಾತ್ಮಕ ಸುದ್ದಿಗಳನ್ನು ಬರೆದು ಸಮಾಜದಲ್ಲಿ ಬದಲಾವಣೆ ತರಬೇಕು’ ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ನಗರಸಭೆ ಆಯುಕ್ತ ರಾಜೀವ ಬಣಕಾರ್, ಇಒ ರಮೇಶ ಸುಲ್ಫಿ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ, ಜೆಡಿಎಸ್ ಅಧ್ಯಕ್ಷ ಶಬ್ಬೀರಪಾಷಾ ಮುಜಾವರ್, ಜಿ.ಎಸ್.ಭುರಳೆ, ಗುರುನಾಥ ಗಡ್ಡೆ, ಪತ್ರಕರ್ತರ ಸಂಘದ ಅಧ್ಯಕ್ಷ ಮಾರ್ತಂಡ ಜೋಶಿ, ಉದಯಕುಮಾರ ಮುಳೆ, ಶಿವಪುತ್ರ ಪಾಟೀಲ ಮಾತನಾಡಿದರು.
ಹುಬ್ಬಳಿಯ ಪತ್ರಕರ್ತ ಅಮರೇಗೌಡ ಗೋನವಾರ ಅವರಿಗೆ ‘ಶಂಕರಪ್ರಸಾದ ದುಬೆ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಗರ ಠಾಣೆ ಪಿಎಸ್‌ಐ ಅಂಬರೀಶ ವಾಗ್ಮೋಡೆ, ನಿವೃತ್ತ ಎಂಜಿನಿಯರ್ ಚಂದ್ರಶೇಖರ ದುಬೆ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕೋರಕೆ, ಆಕಾಶ ಖಂಡಾಳೆ, ಶರಣಪ್ಪ ಪರೆಪ್ಪ ಉಪಸ್ಥಿತರಿದ್ದರು. ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.