ADVERTISEMENT

ಬೀದರ್: ಕೌಶಲ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2023, 7:56 IST
Last Updated 5 ಫೆಬ್ರುವರಿ 2023, 7:56 IST
ಬೀದರ್‌ನ ತೋಟಗಾರಿಕೆ ಕಾಲೇಜಿನಲ್ಲಿ ನಡೆದ ಕೌಶಲ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ನೀಲಗಿರಿ ಸಂಸ್ಥೆಯ ಸಂಸ್ಥಾಪಕ ಸಾವಂತ ಸಾಗರ್ ಸಸಿಗೆ ನೀರೆರೆದು ಉದ್ಘಾಟಿಸಿದರು
ಬೀದರ್‌ನ ತೋಟಗಾರಿಕೆ ಕಾಲೇಜಿನಲ್ಲಿ ನಡೆದ ಕೌಶಲ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ನೀಲಗಿರಿ ಸಂಸ್ಥೆಯ ಸಂಸ್ಥಾಪಕ ಸಾವಂತ ಸಾಗರ್ ಸಸಿಗೆ ನೀರೆರೆದು ಉದ್ಘಾಟಿಸಿದರು   

ಬೀದರ್: ನಗರದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಕೌಶಲ, ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆಯಿತು.
ಕೌಶಲಕ್ಕೆ ಸದಾಕಾಲ ಬೇಡಿಕೆ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಏನಾದರೊಂದು ಕೌಶಲ ಬೆಳೆಸಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ನೀಲಗಿರಿ ಸಂಸ್ಥೆಯ ಸಂಸ್ಥಾಪಕ ಸಾವಂತ ಸಾಗರ್ ಹೇಳಿದರು.
ಡೀನ್ ಡಾ. ಫಾರೂಕ್, ಶಿವಕುಮಾರ ಪೋಲೆ ಮಾತನಾಡಿದರು. ಎನ್‍ಎಸ್‍ಎಸ್ ಅಧಿಕಾರಿಗಳಾದ ಡಾ. ನಾಗೇಂದ್ರ ಕಾವಳೆ, ಡಾ. ರಾಜಕುಮಾರ, ಎಲ್. ಭಾವಿಮನಿ ಇದ್ದರು. ಸಿಮ್ರನ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.