ಚಿಟಗುಪ್ಪ: ‘ಹಿಂದೂ ಧರ್ಮದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅತ್ಯಂತ ಪವಿತ್ರ ಹಬ್ಬವಾಗಿದೆ. ಎಲ್ಲರೂ ಭಕ್ತಿಯಿಂದ ಆಚರಣೆ ಮಾಡಬೇಕು’ ಎಂದು ಪುರಸಭೆ ಉಪಾಧ್ಯಕ್ಷೆ ಸೌಭಾಗ್ಯವತಿ ಸ್ವಾಮಿ ಹೇಳಿದರು.
ಇಲ್ಲಿಯ ಪುರಸಭೆ ಕಚೇರಿಯಲ್ಲಿ ನಡೆದ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಮುಖ್ಯಾಧಿಕಾರಿ ಹುಸಾಮೋದ್ದೀನ್ ಮಾತನಾಡಿ,‘ಪಟ್ಟಣದಲ್ಲಿ ವಿವಿಧ ಸಂಘಟನೆಗಳಿಂದ ನಡೆಯುತ್ತಿರುವ ಅಷ್ಟಮಿ ಕಾರ್ಯಕ್ರಮದ ಆಚರಣೆಗೆ ಪುರಸಭೆ ಸೂಕ್ತ ಸೌಲಭ್ಯಗಳನ್ನು ಒದಗಿಸಿದೆ. ಶಾಂತಿ ಕಾಪಾಡಿಕೊಂಡು ಆಚರಣೆ ಮಾಡಬೇಕು’ ಎಂದು ಅವರು ಹೇಳಿದರು. ಪುರಸಭೆ ಸಿಬ್ಬಂದಿ ರವಿಕುಮಾರ್, ದಿಗಂಬರ್, ಕವಿತಾ, ರಾಜಕುಮಾರ, ನಥಾನಿಯಲ್, ಸಚಿನ, ಸತೀಶ ಕುಮಾರ್, ದೀಲಿಪ್, ರವಿಭಯ್ಯ, ಶೈಲೇಶ್, ಮಲ್ಲಮ್ಮ, ರಾಜು ತೆಲಂಗ್, ಇಲಾಹಿ, ಮಂಜುನಾಥ ಅವರು
ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.