
ಪ್ರಜಾವಾಣಿ ವಾರ್ತೆಬೀದರ್: ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ, ಬೀದರ್ ವತಿಯಿಂದ ಮಾ. 6ರಂದು ಪಂಚಾಕ್ಷರ ಗವಾಯಿ ಅವರ 81ನೇ ಪುಣ್ಯತಿಥಿ, ಪುಟ್ಟರಾಜ ಕವಿ ಗವಾಯಿ ಅವರ 15ನೇ ಪುಣ್ಯತಿಥಿ ಹಾಗೂ ಸಂಘದ 23ನೇ ವಾರ್ಷಿಕೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯಮಟ್ಟದ ಸಂಗೀತ–ನೃತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಪ್ರೊ. ಎಸ್.ವಿ. ಕಲ್ಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ನಡೆಯುವ ಈ ಕಾರ್ಯಕ್ರಮವು ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜರುಗಲಿದೆ. ಅಂದು ಸಂಜೆ 6 ಗಂಟೆಗೆ ಸ್ವಾಮೀಜಿ 2025–26ನೇ ಸಾಲಿನ ಹಿರಿಯ ಕಲಾವಿದರಿಗೆ ಪಂಚಾಕ್ಷರ ಪ್ರಶಸ್ತಿ ಹಾಗೂ ಅಂಧ ಕಲಾವಿದರಿಗೆ ಪುಟ್ಟರಾಜ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.