ಹುಲಸೂರು (ಬೀದರ್): ಭಾಲ್ಕಿ ತಾಲ್ಲೂಕಿನ ಮೇಹಕರ ಗ್ರಾಮದಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ವಿದ್ಯಾರ್ಥಿ ಮುಕೇಶ ಭೀಮರಾವ ಮೊಳಕೇರೆ (16) ಮೃತಪಟ್ಟಿದ್ದಾನೆ.
ದಸರಾ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಇದ್ದುದರಿಂದ ಹೊಲದಲ್ಲಿ ಸೋಯಾಬಿನ್ ಬೆಳೆಯ ಹೊಟ್ಟನ್ನು ಸಂಗ್ರಹಿಸುತ್ತಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಭಾರತ್ ಪಬ್ಲಿಕ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಮುಕೇಶ, ರಜೆ ಇದ್ದುದರಿಂದ ಗ್ರಾಮಕ್ಕೆ ಬಂದಿದ್ದ. ತಂದೆ ಭೀಮರಾವ ತುಳಜಾಪುರದ ದೇವಿ ದರ್ಶನ ಪಡೆಯಲು ತೆರಳಿದ್ದರಿಂದ ತಾಯಿ ಜೊತೆಗೆ ಹೊಲಕ್ಕೆ ಹೋದಾಗ ಘಟನೆ ನಡೆದಿದೆ.
ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.