ADVERTISEMENT

ಸ್ಟಾರ್‌ ಏರ್‌ ಸಮಯದಲ್ಲಿ ದಿಢೀರ್‌ ಬದಲಾವಣೆ, ಜನರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 15:29 IST
Last Updated 16 ಅಕ್ಟೋಬರ್ 2025, 15:29 IST
   

ಬೀದರ್‌: ಬೆಂಗಳೂರು–ಬೀದರ್‌ ನಡುವೆ ಸಂಚರಿಸುತ್ತಿರುವ ಸ್ಟಾರ್‌ ಏರ್‌ ವಿಮಾನದ ಹಾರಾಟದ ಸಮಯ ಬದಲಿಸಿರುವುದಕ್ಕೆ ಸಾರ್ವಜನಿಕರು ಹಾಗೂ ವಾಣಿಜೋದ್ಯಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್‌ನಿಂದ ಬೀದರ್‌–ಬೆಂಗಳೂರು, ಬೆಂಗಳೂರು–ಬೀದರ್ ನಡುವೆ ಸ್ಟಾರ್‌ ಏರ್‌ ವಿಮಾನ ಹಾರಾಟ ಆರಂಭಿಸಿದೆ. ಪ್ರತಿದಿನ ಬೆಳಿಗ್ಗೆ 7.15ಕ್ಕೆ ಬೆಂಗಳೂರಿನಿಂದ ಹೊರಟು 8.15ಕ್ಕೆ ಬೀದರ್‌ ತಲುಪುತ್ತಿದೆ. ಬೆಳಿಗ್ಗೆ 9ಕ್ಕೆ ಬೀದರ್‌ನಿಂದ ಹೊರಟು 10.30ಕ್ಕೆ ಬೆಂಗಳೂರು ಸೇರುತ್ತಿದೆ. ಆದರೆ, ಬೆಂಗಳೂರಿನಿಂದ ಹೊರಡುವ ಸಮಯದಲ್ಲಿ ದಿಢೀರ್‌ ಬದಲಾವಣೆ ಮಾಡಲಾಗಿದೆ. ಬೆಂಗಳೂರಿನಿಂದ ಬೆಳಿಗ್ಗೆ 5.45ಕ್ಕೆ ಹೊರಟು ಬೆಳಿಗ್ಗೆ 7ಕ್ಕೆ ಬೀದರ್‌ ತಲುಪಲಿದೆ. ಅ. 17ರಿಂದ ಜಾರಿಗೆ ಬರುವಂತೆ ಸಮಯ ಬದಲಾಗಿದೆ ಎಂದು ಸ್ಟಾರ್‌ ಏರ್‌ ವೆಬ್‌ಸೈಟಿನಲ್ಲಿ ತಿಳಿಸಲಾಗಿದೆ.

ಬೆಳಿಗ್ಗೆ 5.45ಕ್ಕೆ ವಿಮಾನ ಏರಬೇಕಾದರೆ ಒಂದು ಗಂಟೆ ಮುಂಚಿತವಾಗಿ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಇರಬೇಕು. ಬೆಂಗಳೂರಿನ ವಿವಿಧ ಭಾಗಗಳಿಂದ ಜನ ತಡರಾತ್ರಿಯೇ ವಿಮಾನ ನಿಲ್ದಾಣಕ್ಕೆ ಹೊರಡಬೇಕಾಗುತ್ತದೆ. ಇದೇ ವಿಷಯ ಪ್ರಯಾಣಿಕರು, ವಾಣಿಜ್ಯೋದ್ಯಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿಂದಿನ ಸಮಯದ ಪ್ರಕಾರವೇ ವಿಮಾನ ಹಾರಾಟ ಇರಬೇಕೆಂದು ಒತ್ತಾಯಿಸಿದ್ದಾರೆ.

ADVERTISEMENT

ಈ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ಸ್ಟಾರ್‌ ಏರ್‌ನವರು ಸಮಯ ಬದಲಾವಣೆ ಮಾಡಿರುವ ವಿಷಯ ಜಿಲ್ಲಾಡಳಿತದೊಂದಿಗೆ ಚರ್ಚಿಸಿಲ್ಲ. ಇದು ನಮ್ಮ ಗಮನಕ್ಕಿಲ್ಲ. ಕಾರಣವೇನಂತ ಅವರಿಗೆ ಕೇಳಲಾಗುವುದು ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.