ADVERTISEMENT

ಯುವ ಜನಾಂಗಕ್ಕೆ ಸ್ವಾಮಿ ವಿವೇಕಾನಂದ ಸ್ಫೂರ್ತಿ- ಸಾಮಾಜಿಕ ಕಾರ್ಯಕರ್ತ ರವೀಂದ್ರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 14:47 IST
Last Updated 16 ಜನವರಿ 2022, 14:47 IST
ಔರಾದ್ ತಾಲ್ಲೂಕಿನ ಲಾಧಾ ಗ್ರಾಮದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ರವೀಂದ್ರ ಪಾಟೀಲ ಮಾತನಾಡಿದರು. ಸಂಜಯ್ ಪಾಟೀಲ, ಸೋಮನಾಥ ಸ್ವಾಮಿ, ಮಲ್ಲಿಕಾರ್ಜುನ ಪಾಟೀಲ, ಮಾಧುರಾವ್ ದೇಗಲೆ, ಭೀಮರಾವ್ ಪಾಟೀಲ ಇದ್ದರು

ಬೀದರ್: ಸ್ವಾಮಿ ವಿವೇಕಾನಂದರು ಯುವ ಜನಾಂಗಕ್ಕೆ ಸ್ಫೂರ್ತಿ ಆಗಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ರವೀಂದ್ರ ಪಾಟೀಲ ಹೇಳಿದರು.

ಸೂರ್ಯ ಫೌಂಡೇಷನ್ ವತಿಯಿಂದ ಔರಾದ್ ತಾಲ್ಲೂಕಿನ ಲಾಧಾ ಗ್ರಾಮದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಭಗವದ್ಗೀತೆ, ವೇದ, ಉಪ ನಿಷತ್ತುಗಳನ್ನು ಬಾಲ್ಯದಲ್ಲೇ ಅರಿತಿದ್ದರು. ಬೈಬಲ್, ಕುರಾನ್ ಸೇರಿ ಅನ್ಯ ಧರ್ಮ ಗ್ರಂಥಗಳ ಸಾರವನ್ನೂ ತಿಳಿದುಕೊಂಡಿದ್ದರು ಎಂದು ಹೇಳಿದರು.

ADVERTISEMENT

ಹಿಂದೂ ಧರ್ಮಕ್ಕೆ ಭದ್ರ ಬುನಾದಿ ಹಾಕಿದ್ದರು. ಭಾರತದ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದ್ದರು ಎಂದು ತಿಳಿಸಿದರು.

ಸೂರ್ಯ ಫೌಂಡೇಷನ್ ಪ್ರಮುಖ ಭೀಮರಾವ್ ಪಾಟೀಲ ಮಾತನಾಡಿದರು. ಮಾಧುರಾವ್ ದೇಗಲೆ, ಸೋಮನಾಥ ಸ್ವಾಮಿ, ಸಂಜಯ್ ಪಾಟೀಲ, ಮಲ್ಲಿಕಾರ್ಜುನ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.