ADVERTISEMENT

ಬಸವಕಲ್ಯಾಣ: ಪತಂಗೆ ಪೆನಲ್ ವಿಜಯಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 10:39 IST
Last Updated 19 ಡಿಸೆಂಬರ್ 2020, 10:39 IST
ಜಗನ್ನಾಥ ಪತಂಗೆ
ಜಗನ್ನಾಥ ಪತಂಗೆ   

ಬಸವಕಲ್ಯಾಣ: ಇಲ್ಲಿನ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಜಗನ್ನಾಥ ಪತಂಗೆ ನೇತೃತ್ವದ ಪೆನಲ್‌ನ ಎಲ್ಲ ಸದಸ್ಯರು ಗೆದ್ದಿದ್ದಾರೆ.

ಈ ಗುಂಪಿನ ಜಗನ್ನಾಥ ಪತಂಗೆ (522), ಹಣಮಂತ ಆರ್.ಬಿ. ಇಲ್ಲಾಳ (518), ಅಲ್ಲಾವುದ್ದೀನ್ ಪಟೇಲ್ ರಾಜೋಳಾ (501), ಮಹೇಶ ಮುಳೆ ನಾರಾಯಣಪುರ (444), ಶಿವಪುತ್ರ ಓಕಳಿ ಏಕಲೂರವಾಡಿ (396), ರಮೇಶ ಉಮಾಪುರೆ ಮಂಠಾಳ (391), ಲಕ್ಷ್ಮಣ ಹೆಂಬಾಡೆ ಗೌರ (389), ವೀರೇಂದ್ರರೆಡ್ಡಿ ಗೌರತಾಂಡಾ (385), ಉಲ್ಲಾಸ ಇಂದುಕಾಂದೆ ಲಾಡವಂತಿವಾಡಿ (369), ಸಂತೋಷ ಅಕ್ಕಣ್ಣ ತಳಭೋಗ (366), ಚಿದಂಬರ ಶೇಖರ್ ಕಲಖೋರಾ (361), ಅರುಣಾ ಚಂದ್ರಕಾಂತಸ್ವಾಮಿ ಮಂಠಾಳ (547), ಮೀನಾಕ್ಷಿ ಜಾಧವ ಖಾನಾಪುರ (536), ರಾಜಮತಿ ಕೋರಾಳೆ ಸಸ್ತಾಪುರ (517), ಚಂದ್ರಕಲಾ ಭಂಗೆ ರಾಜೇಶ್ವರ (443), ಮೀನಾಕುಮಾರಿ ಸೂರ್ಯವಂಶಿ ನಿರ್ಗುಡಿ (408) ಮತ್ತುಮಹಮ್ಮದಿಬೇಗಂ ಮಂಠಾಳ (395) ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಹಳ್ಳದ್ ತಿಳಿಸಿದ್ದಾರೆ.

ಆಯ್ಕೆ ನಂತರ ವಿಜೇತರನ್ನು ಶಿಕ್ಷಕರಿಂದ ಹಾಗೂ ಬೆಂಬಲಿಗರಿಂದ ಸನ್ಮಾನಿಸಲಾಯಿತು.

ADVERTISEMENT

ಜಗನ್ನಾಥ ಪತಂಗೆಯವರು ಮೂರು ಅವಧಿಗೆ ತಾಲ್ಲೂಕು ಘಟಕದ ಅಧ್ಯಕ್ಷ ಹಾಗೂ ಒಂದು ಅವಧಿಗೆ ಜಿಲ್ಲಾ ಘಟಕದ ಅಧ್ಯಕ್ಷ ಆಗಿದ್ದರು. ಪರಿವರ್ತನಾ ಪೆನಾಲ್ ಮತ್ತು ಇವರ ಪೆನಾಲ್ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. 11 ಸಾಮಾನ್ಯ ಸ್ಥಾನಗಳಿಗೆ 26 ಜನರು ಹಾಗೂ 6 ಮಹಿಳಾ ಸ್ಥಾನಗಳಿಗೆ 10 ಜನರು ಸ್ಪರ್ಧಿಸಿದ್ದರು. 874 ಶಿಕ್ಷಕರಲ್ಲಿ 795 ಜನರು ಮತ ಚಲಾಯಿಸಿದ್ದರು. ಶೇ 90 ರಷ್ಟು ಮತದಾನವಾಗಿತ್ತು. ಮಂಗಳವಾರ ಮತದಾನ ನಡೆದಿದ್ದು ಮಧ್ಯರಾತ್ರಿವರೆಗೆ ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.