ADVERTISEMENT

ಶಿಕ್ಷಕರ ದಿನಾಚರಣೆ: 29 ಮಂದಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 6:47 IST
Last Updated 7 ಸೆಪ್ಟೆಂಬರ್ 2025, 6:47 IST
   

ಬೀದರ್‌: ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲಾ ಶಿಕ್ಷಣ ಇಲಾಖೆಯು 2024–25, 2025–26ನೇ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ.

ಒಟ್ಟು 29 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಡಿಡಿಪಿಐ ಕಚೇರಿಯ ಜಿಲ್ಲಾ ನೋಡಲ್‌ ಅಧಿಕಾರಿ ಗುಂಡಪ್ಪ ಹುಡಗಿ ತಿಳಿಸಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾದವರು:2025–26ನೇ ಸಾಲಿಗೆ ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಔರಾದ್‌ ತಾಲ್ಲೂಕಿನ ಬಾದಲಗಾಂವ್‌ ಶಾಲೆಯ ಕೈಲಾಸಪತಿ, ಬಸವಕಲ್ಯಾಣ ತಾಲ್ಲೂಕಿನ ರಾಜೋಳಾದ ಭಾಗ್ಯಜ್ಯೋತಿ, ಭಾಲ್ಕಿಯ ಸಿ.ಬಿ. ನಗರದ ಅಂಜನಾಬಾಯಿ, ಬೀದರ್‌ ಲಾಲಭಾಗ ಶಾಲೆಯ ಸಂಗೀತಾ, ಹುಮನಾಬಾದ್‌ ತಾಲ್ಲೂಕಿನ ಧುಮ್ಮನಸೂರ ತಾಂಡಾದ ಸುನೀತಾ, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಔರಾದ್‌ ತಾಲ್ಲೂಕಿನ ದಾಪಕಾ ಶಾಲೆಯ ಗುಣವಂತ, ಬಸವಕಲ್ಯಣದ ತ್ರಿಪುರಾಂತದ ಶರಣಪ್ಪ ವಾಡೇಕರ್‌ ಆಯ್ಕೆಯಾಗಿದ್ದಾರೆ.

ADVERTISEMENT

ಭಾಲ್ಕಿ ತಾಲ್ಲೂಕಿನ ಲಖನಗಾಂವ್‌ನ ಶ್ವೇತಾಬಾಯಿ, ಬೀದರ್‌ ತಾಲ್ಲೂಕಿನ ಬಗದಲ್‌ನ ಝರೆಪ್ಪ, ಹುಮನಾಬಾದ್‌ ತಾಲ್ಲೂಕಿನ ಡಾಕುಳಗಿಯ ಮಹಾದೇವಿ, ಪ್ರೌಢಶಾಲಾ ವಿಭಾಗದಿಂದ ಔರಾದ್‌ನ ದತ್ತಾತ್ರಿ ಗಿರಿ, ಹುಲಸೂರಿನ ರೇಣುಕಾ, ಭಾಲ್ಕಿ ತಾಲ್ಲೂಕಿನ ಹಲಬರ್ಗಾದ ಧನಲಕ್ಷ್ಮಿ, ಬೀದರ್‌ನ ಆಸ್ಮಾ ಆಶಾ ಬೇಗಂ, ಹುಮನಾಬಾದ್‌ ತಾಲ್ಲೂಕಿನ ಬೇಮಳಖೇಡಾದ ಸಂಗಮ್ಮ ಆದರ್ಶ ಆಯ್ಕೆಯಾಗಿದ್ದಾರೆ.

2024–25ನೇ ಸಾಲಿಗೆ ಪ್ರೌಢಶಾಲೆ ವಿಭಾಗದಿಂದ ಔರಾದ್‌ ತಾಲ್ಲೂಕಿನ ದಾಪಕಾ ಶಾಲೆಯ ಸಂಜೀವಕುಮಾರ, ಬಸವಕಲ್ಯಾಣ ತಾಲ್ಲೂಕಿನ ಅಲಗೂಡಿನ ನಾಗಪ್ಪ ನಿಣ್ಣೆ, ಭಾಲ್ಕಿ ತಾಲ್ಲೂಕಿನ ನಿಟ್ಟೂರಿನ ಅವಿನಾಶ, ಬೀದರ್‌ ತಾಲ್ಲೂಕಿನ ಭಂಗೂರ ಶಾಲೆಯ ವಿನೋದಕುಮಾರ, ಹುಮನಾಬಾದಿನ ಅಬ್ದುಲ್‌ ಸಾಬ್‌, ಕಿರಿಯ ಪ್ರಾಥಮಿಕ ವಿಭಾಗದಿಂದ ಬಸವಕಲ್ಯಾಣ ತಾಲ್ಲೂಕಿನ ಹಂದ್ರಾಳದ ಅನಿಲಕುಮಾರ ಶಾಸ್ತ್ರಿ, ಭಾಲ್ಕಿಯ ಭಗವಾನವಾಡಿಯ ಸುಲೋಚನಾ ಪಾಟೀಲ್‌, ಬೀದರ್‌ ತಾಲ್ಲೂಕಿನ ಹಮೀಲಾಪೂರ ಶಾಲೆಯ ಸಾವಿತ್ರಿ, ಹುಮನಾಬಾದ್‌ ತಾಲ್ಲೂಕಿನ ಕಪ್ಪರಗಾಂವ್‌ ಶಾಲೆಯ ಅರುಣಾ ಜಾಧವ್‌, ಕಿರಿಯ ಪ್ರಾಥಮಿಕ ವಿಭಾಗದಿಂದ ಔರಾದ್‌ ತಾಲ್ಲೂಕಿನ ವರಮಾರಪಳ್ಳಿ ಶಾಲೆಯ ಮಾಧವರಾವ್‌, ಬಸವಕಲ್ಯಾಣ ತಾಲ್ಲೂಕಿನ ಮೋರಖಂಡಿಯ ಮಾನೆ ಧನರಾಜ, ಭಾಲ್ಕಿ ತಾಲ್ಲೂಕಿನ ವಳಸಂಗದ ಕಾವೇರಿ, ಬೀದರ್‌ ರಾವ ತಾಲೀಂನ ಎಂ.ಡಿ. ಅಜಂ ಪಾಶಾ, ಹುಮನಾಬಾದ್‌ ತಾಲ್ಲೂಕಿನ ಮರಕಲ್‌ ಶಾಲೆಯ ರಾಮನಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.