ಬೀದರ್: ವಿವಿಧ ಸಂಘ ಸಂಸ್ಥೆ ಹಾಗೂ ಶಿಕ್ಷಣ ಸಂಸ್ಥೆಗಳಿಂದ ನಗರದಲ್ಲಿ ಶುಕ್ರವಾರ ಶಿಕ್ಷಕರ ದಿನ ಆಚರಿಸಲಾಯಿತು. ಅದರ ವಿವರ ಇಂತಿದೆ.
ಸಂಸ್ಥೆಯ ಅಧ್ಯಕ್ಷ ಸರ್ದಾರ್ ಬಲಬೀರ್ ಸಿಂಗ್ ಅವರು ರಾಧಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ, ದೀಪ ಬೆಳೆಗಿಸಿದರು.
ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿ, ಮುಂದೆ ಗುರಿ, ಹಿಂದೆ ಗುರು ಇದ್ದಲ್ಲಿ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ಪ್ರತಿಯೊಬ್ಬ ಶಿಕ್ಷಕರು ಸೇವಾ ಮನೋಭಾವನೆಯಿಂದ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಲ್ಲಿ ಶಿಸ್ತು, ದೇಶಪ್ರೇಮ ಬೆಳೆಸಬೇಕು ಎಂದರು.
ಶಿಕ್ಷಕರನ್ನು ಸನ್ಮಾನಿಸಲಾಯಿತು. ನಾನಕ ಝೀರಾ ಸಾಹೇಬ್ ಫೌಂಡೇಶನ್ ಕಾರ್ಯದರ್ಶಿ ಸರ್ದಾರ್ ನಾನಕ ಸಿಂಗ್, ಟ್ರಸ್ಟಿ ಸರ್ದಾರ್ ಪ್ರೀತಂ ಸಿಂಗ್, ಪ್ರಾಚಾರ್ಯೆ ನಲಿನಿ ಡಿ.ಜಿ. ಇದ್ದರು.
ಸಂಘಟನೆಯಿಂದ ನಗರದಲ್ಲಿ ಏರ್ಪಡಿಸಿದ್ದ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಉತ್ತಮ ಸಾಧನೆ ತೋರಿದ ವಿವಿಧ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಗಣಪತಿ ಸಿನ್ನೂರ ಮಾತನಾಡಿ, ಅನಕ್ಷರಸ್ಥರನ್ನು ಸಾಕ್ಷರರಾಗಿ ಮಾಡಿ ಪರಿವರ್ತನೆ ತರುವ ದೊಡ್ಡ ಕೆಲಸ ಶಿಕ್ಷಕರು ಮಾಡುತ್ತಾರೆ. ಅವರ ಕೊಡುಗೆ ಸದಾ ಸ್ಮರಣೀಯ ಎಂದರು.
ಸಾಧ್ವಿ ಬಸವರಾಜ ಬಿರಾದಾರ ವಚನ ನೃತ್ಯ ಪ್ರಸ್ತುತಪಡಿಸಿದರು. ಸ್ವಪ್ನ ಮಹೇಶ ಮಾಶೆಟ್ಟಿ, ಡಾ. ಪ್ರಶಾಂತ ಮಾಶೆಟ್ಟಿ, ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆ ವಿದ್ಯಾವತಿ ಬಲ್ಲೂರ, ವಚನ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಲ್ಲಮಪ್ರಭು ನಾವದಗೇರೆ, ನಿರ್ದೇಶಕರಾದ ಶಿವಕುಮಾರ ಸಾಲಿ, ಸಂಜೀವಕುಮಾರ ಚಿಲ್ಲರ್ಗಿ, ಸುರೇಶ ಪಾಟೀಲ, ಶಿವಶಂಕರ ಟೋಕರೆ, ಮಲ್ಲಿಕಾರ್ಜುನ ಟಂಕಸಾಲೆ, ವೈಜಿನಾಥ ಸಜ್ಜನಶೆಟ್ಟಿ, ಸಂಜೀವಕುಮಾರ ಬಿರಾದಾರ ಇದ್ದರು.
ಸಹ-ಶಿಕ್ಷಕ ಸುರೇಂದ್ರ ಕಾಳೆ ಮಾತನಾಡಿ, ಶಿಕ್ಷಕ ಎಂಬ ಪದ ವಿದ್ಯಾರ್ಥಿಗಳಿಂದ ಹುಟ್ಟಿದೆ. ಒಂದುವೇಳೆ ವಿದ್ಯಾರ್ಥಿಗಳೇ ಇಲ್ಲದೆ ಹೋದರೆ ಶಿಕ್ಷಕನೆಂಬ ಪದವಿ ಇರುತ್ತಿರಲಿಲ್ಲ ಎಂದರು.
10ನೇ ತರಗತಿ ವಿದ್ಯಾರ್ಥಿನಿ ವರಲಕ್ಷ್ಮೀ ವಸಂತ ಶಿಕ್ಷಕರ ದಿನಾಚರಣೆ ಮಹತ್ವ ಕುರಿತು ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಬಿ. ಸಜ್ಜನಶೆಟ್ಟಿ, ಕಾರ್ಯದರ್ಶಿ ಹನುಮಂತರಾವ್ ಪಾಟೀಲ, ಉಪಾಧ್ಯಕ್ಷ ನಾಗೇಶ ಚಿನ್ನಾರೆಡ್ಡಿ, ಆಡಳಿತ ಮಂಡಳಿಯ ಸದಸ್ಯ ಶಿವಶರಣಪ್ಪ ಪಾಟೀಲ, ಆಡಳಿತಾಧಿಕಾರಿ ಬಂಡೆಪ್ಪ ಎಕಲಾರೆ, ಮುಖ್ಯಶಿಕ್ಷಕಿ ಪ್ರತಿಭಾ ಚಾಮಾ ಇದ್ದರು. ರಿತೀಕಾ ಸ್ವಾಗತಿಸಿದರೆ, ಸುಪ್ರಿಯಾ ನಿರೂಪಿಸಿದರು. ಭಾಗ್ಯಶ್ರೀ ವಂದಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಧ್ಯಕ್ಷ ಚಂದ್ರಕಾಂತ ಪಾಟೀಲ ಅವರು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸಿದರು. ಕಾಲೇಜಿನ ಉಪನ್ಯಾಸಕರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯೆ ಮಂಗಲಾ ಎನ್.ಎಂ., ಸಿಬ್ಬಂದಿ ಇದ್ದರು.
ಮಡಿವಾಳೇಶ್ವರ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ: ಶರಣು ಪಾಟೀಲ ಮಾತನಾಡಿ, ಶಿಕ್ಷಕರೇ ಈ ಭವ್ಯ ಭಾರತ ನಿರ್ಮಾಣದ ಶಿಲ್ಪಿಗಳು. ಸರ್ವಪಲ್ಲಿ ರಾಧಾಕೃಷ್ಣನ್ ಅವರ ನೆಚ್ಚಿನ ವೃತ್ತಿ ಶಿಕ್ಷಕ ವೃತ್ತಿಯಾಗಿತ್ತು. ಭಾರತಕ್ಕಾಗಿ ಅವರು ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಭಾರತೀಯರ ಬಗ್ಗೆ ವಿದೇಶಿಯರು ಗೌರವ ಭಾವನೆಯನ್ನು ಬೆಳೆಸಿಕೊಳ್ಳುವಂತೆ ಮಾಡಿದ್ದಾರೆ ಎಂದರು.
ಚನ್ನಬಸವಂತ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಸ್ ಬಿ ಸಜ್ಜನಶೆಟ್ಟಿ, ಕಾರ್ಯದರ್ಶಿ ಹನುಮಂತರಾವ್ ಪಾಟೀಲ್, ಉಪಾಧ್ಯಕ್ಷ ನಾಗೇಶ್ ರೆಡ್ಡಿ, ಆಡಳಿತ ಮಂಡಳಿ ಸದಸ್ಯ ಶಿವಶರಣಪ್ಪ ಪಾಟೀಲ್, ಆಡಳಿತ ಅಧಿಕಾರಿ ಬಂಡೆಪ್ಪ ಎಕಲಾರೆ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಅರ್ಚನಾ ಶಿರಿಗೇರೆ ಇದ್ದರು. ವೈಷ್ಣವಿ ರಾಜೇಂದ್ರ ಪ್ರಸಾದ್ ಸ್ವಾಗತಿಸಿದರೆ, ಶ್ರದ್ಧಾ ನೀಲಕಂಠ ಭಕ್ತಿಗೀತೆ ಹೇಳಿದರು. ತ್ರಿಶಾ ಸಿದ್ದೇಶ್ವರ ನಿರೂಪಿಸಿದರೆ, ಅಂಕಿತಾ ಚಂದ್ರಕಾಂತ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.