ADVERTISEMENT

ಶಿಕ್ಷಕರ ಮಾರ್ಗದರ್ಶನದಿಂದ ಉನ್ನತ ಸ್ಥಾನ: ಶಿವಾಜಿ.ಆರ್.ಎಚ್

ಗ್ರಾಮ ಪಂಚಾಯಿತಿ ವತಿಯಿಂದ 35 ಶಿಕ್ಷಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 9:09 IST
Last Updated 6 ಸೆಪ್ಟೆಂಬರ್ 2021, 9:09 IST
ಕಮಲನಗರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು
ಕಮಲನಗರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು   

ಕಮಲನಗರ: ‘ಶಿಕ್ಷಕರಿಗೆ ಗೌರವ ಕೊಟ್ಟು ಅವರ ಮಾರ್ಗದರ್ಶನದಲ್ಲಿ ನಡೆದವರು ಜೀವನದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ’ ಎಂದು ಶಾಂತಿವರ್ಧಕ ಪಿಯು ಕಾಲೇಜಿನ ಪ್ರಾಂಶುಪಾಲ ಶಿವಾಜಿ.ಆರ್.ಎಚ್ ಹೇಳಿದರು.

ಕಮಲನಗರ ಗ್ರಾಮ ಪಂಚಾಯಿತಿ ವತಿಯಿಂದ ಭಾನುವಾರ ಕಚೇರಿ ಸಭಾಂಗಣದಲ್ಲಿ ನಡೆದ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೆ ಗುರು ಇರಬೇಕು ಮುಂದೆ ಗುರಿ ಇರಬೇಕು. ಅಂದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಗುರು ಎಂಬ ಶಕ್ತಿಯಿಂದ ಮಾತ್ರ ಜಗತ್ತು ನಡೆಯುತ್ತಿದೆ. ಶಾಲೆಯ ಕೋಣೆಗಳಲ್ಲಿ ದೇಶದ ಎಲ್ಲ ರೀತಿಯ ವ್ಯಕ್ತಿಗಳು ತಜ್ಞರು ಸೃಷ್ಟಿಗೊಳ್ಳುತ್ತಾರೆ ಇದಕ್ಕೆ ಕಾರಣವೇ ಗುರುಗಳು ಎಂದು ಅವರು ಹೇಳಿದರು.

ADVERTISEMENT

ಕಮಲನಗರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಕುಮಾರ ತಂಬಾಕೆ, ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಸಂತೋಷ ಮುಧಾಳೆ ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವರಾಜ ಜುಲ್ಫೆ ಅವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಬಾಲಾಜಿ ತೆಲಂಗ್, ಮುಖಂಡ ಶಿವಾನಂದ ವಡ್ಡೆ, ರವಿ ಕಾರಬರಿ, ವಿರೇಶ ತೋರ್ಣೆಕರ, ಸಾಯಿನಾಥ, ಮಹಾದೇವ, ಶಿಲ್ಪಾ ವಿರೇಂದ್ರ, ಮೀನಾಕ್ಷಿ ಸಂಜುಕುಮಾರ, ಡಿಇಒ ಅಮರ ಮಿರ್ಚೆ, ನಿರ್ಮಲಾ ಕಾರಬರಿ, ಮಲ್ಲಪ್ಪ ಸ್ವಾಮಿ, ರಾಜಕುಮಾರ, ಶರಣಪ್ಪ, ಬಾಲಾಜಿ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.