ADVERTISEMENT

ಜಿಲ್ಲೆಯ 190 ವಿವಿಪ್ಯಾಟ್‌ಗಳಲ್ಲಿ ದೋಷ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 12:03 IST
Last Updated 24 ಏಪ್ರಿಲ್ 2019, 12:03 IST

ಬೀದರ್‌: ಜಿಲ್ಲೆಯ 190 ಮತಗಟ್ಟೆಗಳ ವಿವಿಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷ ಕಾಣಿಸಿ ಕೊಂಡಿರುವುದು ಕಂಡು ಬಂದಿದೆ. ಚುನಾವಣಾ ಸಿಬ್ಬಂದಿ ತಕ್ಷಣ ಅವುಗಳನ್ನು ಬದಲಾಯಿಸಿ ಶಾಂತಿಯುತ ಚುನಾವಾಣೆಗೆ ಅವಕಾಶ ಮಾಡಿಕೊಟ್ಟರು.

ಅತಿಯಾದ ಬಿಸಿಲಿನಿಂದಾಗಿ ಭಾಲ್ಕಿ ತಾಲ್ಲೂಕಿನ 15 ಮತಗಟ್ಟೆಗಳಲ್ಲಿ ವಿವಿಪ್ಯಾಟ್‌ಗಳಲ್ಲಿ ಸುಮಾರು ಅರ್ಧಗಂಟೆ ತಾಂತ್ರಿಕ ದೋಷ ಕಂಡು ಬಂದಿತು. ಮತದಾರರು ಮತ ಚಲಾಯಿಸಿದರೂ ವಿವಿಪ್ಯಾಟ್‌ ಚೀಟಿ ಹೊರಬರಲಿಲ್ಲ. ಕಮಲನಗರ, ಸೋನಾಳ, ಕಳಗಾಪುರ, ಮುರ್ಕಿವಾಡಿ, ತೊಣವಾಡಿಯಲ್ಲಿ ಕೆಲ ಕಾಲ ಮತಯಂತ್ರಗಳಲ್ಲಿ ಇಂತಹದ್ದೇ ಸಮಸ್ಯೆ ಕಾಣಿಸಿಕೊಂಡಿತು. ತಾಂತ್ರಿಕ ಸಿಬ್ಬಂದಿ ಅವುಗಳನ್ನು ತಕ್ಷಣ ಸರಿಪಡಿಸಿದರು.

‘20 ಕಂಟ್ರೋಲ್ ಯುನಿಟ್, 20 ಬ್ಯಾಲೆಟ್ ಯುನಿಟ್ ಹಾಗೂ 190 ವಿವಿಪ್ಯಾಟ್‌ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಜಿಲ್ಲೆಯಲ್ಲಿ 976 ವಿವಿಪ್ಯಾಟ್‌ಗಳ ಹೆಚ್ಚುವರಿಯಾಗಿ ಇಟ್ಟುಕೊಳ್ಳಲಾಗಿತ್ತು. ಹೀಗಾಗಿ ದೋಷ ಕಾಣಿಸಿಕೊಂಡ 190 ಮತಗಟ್ಟೆಗಳ ವಿವಿಪ್ಯಾಟ್‌ಗಳಲ್ಲಿ ಬೇರೆ ವಿವಿಪ್ಯಾಟ್‌ ಜೋಡಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ತಿಳಿಸಿದರು.

ADVERTISEMENT

ಮಹಾರಾಷ್ಟ್ರದಲ್ಲಿರುವ ಕಮಲನಗರ ತಾಲ್ಲೂಕಿನ ಚಿಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೊಂಡಿಮುಖೇಡ ಗ್ರಾಮದಲ್ಲಿ ರಾತ್ರಿ 8.10ರ ವರೆಗೂ ಮತದಾನ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.