ADVERTISEMENT

ಬಿಎಸ್‍ಎಫ್ ಯೋಧನ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 3:39 IST
Last Updated 9 ಜುಲೈ 2021, 3:39 IST
ಬಸವರಾಜ
ಬಸವರಾಜ   

ಔರಾದ್: ಮಂಗಳವಾರ ಸಾವನ್ನಪ್ಪಿದ ಬಿಎಸ್‍ಎಫ್ ಯೋಧ ಬಸವರಾಜ ಗಣಪತಿ ಅವರ ಅಂತ್ಯಕ್ರಿಯೆ ಗುರುವಾರ ಸಂಜೆ ತಾಲ್ಲೂಕಿನ ಆಲೂರ್‌ (ಬಿ) ಗ್ರಾಮದಲ್ಲಿ ನೆರವೇರಿತು.

ಮೃತದೇಹವನ್ನು ಪಂಜಾಬ್‍ನಿಂದ ವಿಮಾನದ ಮೂಲಕ ಹೈದರಾಬಾದ್‍ಗೆ ತಂದು ಅಲ್ಲಿಂದ ಸೇನಾ ವಾಹನದಲ್ಲಿ ರಸ್ತೆ ಮೂಲಕ ಆಲೂರ್(ಬಿ) ಗ್ರಾಮಕ್ಕೆ ತರಲಾಯಿತು. ಸಂಜೆ 5.30ರ ಹೊತ್ತಿಗೆ ಯೋಧನ ಮೃತದೇಹ ಗ್ರಾಮಕ್ಕೆ ಬರುತ್ತಿ ದ್ದಂತೆ ಯುವಕರು ಭಾರತ ಮಾತಾಕೀ ಜೈ ಎಂದು ಘೋಷಣೆ ಕೂಗಿದರು.

ಕೌಠಾ, ಕೌಡಗಾಂವ್, ವಡಗಾಂವ್ ಸೇರಿದಂತೆ ಸುತ್ತಲಿನ ಗ್ರಾಮಗಳ ಯುವಕರು, ಶವ ಹೊತ್ತು ತಂದ ಸೇನಾ ವಾಹನದ ಸುತ್ತುವರಿದು ಯೋಧನ ಸಾವಿಗೆ ಶೋಕ ವ್ಯಕ್ತಪಡಿಸಿದರು. ಅಂತ್ಯಕ್ರಿಯೆ ವೇಳೆ ಯೋಧನ ಸಂಬಂಧಿ ಕರ ಆಕ್ರಂದನ ಮುಗಿಲು ಮುಟ್ಟಿತು.

ADVERTISEMENT

ಸೇನಾ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿತು.

‘ಭಾರತ- ಪಾಕಿಸ್ತಾನ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಬಸವರಾಜ ಅವರು ಮಂಗಳವಾರ ಸಂಜೆ ತಮ್ಮ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ’ ಎಂದು ಅಲ್ಲಿಯ ಸೇನಾ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.