ಬೀದರ್: ಭಾಲ್ಕಿ-ಔರಾದ್-ಹೈದರಾಬಾದ್ ಮಾರ್ಗದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಅತಿಹೆಚ್ಚು ಆದಾಯ ತಂದುಕೊಟ್ಟ ನಿರ್ವಾಹಕ ಆರ್.ಬಿ. ರಮೇಶ ಅವರನ್ನು ಭಾಲ್ಕಿ ಡಿಪೊದಲ್ಲಿ ಸತ್ಕರಿಸಲಾಯಿತು.
ಡಿಪೊ ವ್ಯವಸ್ಥಾಪಕ ಶ್ರೀಮಂತ ಘಂಟೆ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ರಮೇಶ ಅವರು ಭಾಲ್ಕಿ-ಔರಾದ್-ಹೈದರಾಬಾದ್ ಮಾರ್ಗದಲ್ಲಿ ಸಂಸ್ಥೆಗೆ ದಾಖಲೆಯ ₹ 42,791 ಆದಾಯ ತಂದಿದ್ದಾರೆ. ಇದು, ಈವರೆಗಿನ ಅತ್ಯಧಿಕ ಆದಾಯವಾಗಿದೆ. ಪ್ರತಿ ಕಿ.ಮೀ. ಆದಾಯ(ಇಪಿಕೆಎಂ) ₹ 51.5 ಆಗಿದೆ ಎಂದು ಅವರು ತಿಳಿಸಿದರು.
ರಮೇಶ ಹಿರಿಯ ನಿರ್ವಾಹಕರಲ್ಲಿ ಒಬ್ಬರಾಗಿದ್ದಾರೆ. ಹುಮನಾಬಾದ್, ಬೀದರ್ ಡಿಪೊದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಭಾಲ್ಕಿ ಡಿಪೊದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವಾ ನಿಷ್ಠೆ ಮಾದರಿಯಾಗಿದೆ ಎಂದು ಹೇಳಿದರು.
ಚಾರ್ಜ್‍ಮೆನ್ ರಾಜೇಂದ್ರ, ಅಸ್ಟಿಸ್ಟಂಟ್ ಟ್ರಾಫಿಕ್ ಇನ್‍ಸ್ಟೆಕ್ಟರ್ ಹಣಮಂತ, ಓಂಕಾರ, ಕೆ.ಎಂ.ಪಿ.ಎಲ್ ಮಾಸ್ಟರ್ ಶಾಂತವೀರ, ನಿರ್ವಾಹಕ ವಿಜಯಕುಮಾರ, ಚಾಲಕರಾದ ಸುಂದರರಾಜ್ ಹಾಗೂ ದಯಾನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.