ADVERTISEMENT

ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರ ಅಮೃತವಾಣಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 11:17 IST
Last Updated 9 ಆಗಸ್ಟ್ 2021, 11:17 IST
ಬಸವಲಿಂಗ ಪಟ್ಟದ್ದೇವರು
ಬಸವಲಿಂಗ ಪಟ್ಟದ್ದೇವರು   

ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರು

ಅಂತರಂಗ ಕೃಷಿ

ಬೀದರ್‌: ಕೃಷಿಗಳಲ್ಲಿ ಎರಡು ಪ್ರಕಾರ, ಬಹಿರಂಗ ಕೃಷಿ ಮತ್ತು ಅಂತರಂಗ ಕೃಷಿ. ಬಹಿರಂಗ ಕೃಷಿ ಎಷ್ಟು ಮುಖ್ಯವೋ ಅಂತರಂಗ ಕೃಷಿ ಅಷ್ಟೇ ಮುಖ್ಯ. ಬಹಿರಂಗ ಕೃಷಿಯಿಂದ ಹೊಟ್ಟೆ ತುಂಬಿದರೆ ಅಂತರಂಗ ಕೃಷಿಯಿಂದ ಪರಮಜ್ಞಾನ, ಸತ್ಯಜ್ಞಾನ ಸದಾ ಆನಂದವಾಗಿ ಬದುಕುವ ಜ್ಞಾನ ಪ್ರಾಪ್ತವಾಗುತ್ತದೆ. ಒಲೆ ಅಡುಗೆ, ತಲೆ ಅಡುಗೆ ಎರಡು ಮುಖ್ಯ.

ADVERTISEMENT

ಅಂತರಂಗ ಕೃಷಿ ಹೇಗೆ ಮಾಡಬೇಕು ಎಂಬುದನ್ನು ಶರಣರು, ಸಂತರು, ಮಹಾನುಭಾವರು ತಿಳಿಸಿಕೊಟ್ಟಿದ್ದಾರೆ. ಹೃದಯವೇ ಹೊಲ, ಈ ಹೊಲದಲ್ಲಿ ಅಷ್ಟಮದ, ಷಡ್ವಿಕಾರಗಳ ಕಸ ಬೀಳುತ್ತದೆ. ಅದನ್ನು ಮೊದಲು ಸ್ವಚ್ಛ ಮಾಡಬೇಕು. ಅಂತರೇಂದ್ರಿಯ ಬಾಹ್ಯೇಂದ್ರಿಯ ನಿಗ್ರಹಿಸಬೇಕು. ಅದನ್ನು ನಿಗ್ರಹಿಸಿದರೆ ನಿರ್ಮಲವಾದ ಮನಸ್ಸು ಸಿದ್ಧವಾಗುತ್ತದೆ. ನಾನು-ನನ್ನದು ಎಂಬ ಕರಿಕೆಯನ್ನು ಬೇರು ಸಮೇತ ಕಿತ್ತು ಹಾಕಬೇಕು. ಸಮತೆ ಎಂಬ ಗೊಬ್ಬರ ಚೆಲ್ಲಬೇಕು. ಸದ್ಗುರು ಬಂದು ಸದ್ಗುಣಗಳ ಬೀಜಗಳನ್ನು ಬಿತ್ತುತ್ತಾನೆ. ಉತ್ತಮ ಸಂಸ್ಕಾರವೆಂಬ ಮಳೆ ಬರುತ್ತದೆ. ಆಗಾಗ ಬರುವ ದುರಿತ ದುರ್ಗುಣಗಳ ಕಳೆಯನ್ನು ತೆಗೆದಾಗ ಅರಿವು ಎನ್ನುವ ಬೆಳೆ ಬರುತ್ತದೆ. ಸಂತೃಪ್ತಿ ಪರಮಾನಂದ ಧಾನ್ಯಗಳನ್ನು ಬೆಳೆದು ಶಿವಜ್ಞಾನದ ಆನಂದವನ್ನು ಮನದಣಿಯುವಂತೆ ಅನುಭವಿಸುತ್ತಾನೆ. ಅದಕ್ಕಾಗಿ ಬಾಹ್ಯ ಕೃಷಿ ಜೊತೆ ಅಂತರಂಗ ಕೃಷಿ ಕಡೆಯೂ ಹೆಚ್ಚು ಮಹತ್ವ ಕೊಡುವುದು ಕಾಲದ ಅಗತ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.