ADVERTISEMENT

ಗೋಡೆ ಕುಸಿದು ಕಾರ್ಮಿಕ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 10:59 IST
Last Updated 12 ಅಕ್ಟೋಬರ್ 2022, 10:59 IST

ಹುಮನಾಬಾದ್: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬುಧವಾರ ಗೋಡೆ ಕುಸಿದು ಕಾರ್ಮಿಕರೊಬ್ಬರು ಗಂಭೀರ ಗಾಯಗೊಂಡಿದ್ದಾರೆ.

ತಾಲ್ಲೂಕಿನ ಬೋರಂಪಳ್ಳಿ ಗ್ರಾಮದ ತಿಪ್ಪಣ್ಣ ಗಾಯಗೊಂಡವರು.

ಕಳೆದ ಐದು ದಿನಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹಳೇ ತರಗತಿ ಕೋಣೆಗಳನ್ನು ನೆಲಸಮ ಮಾಡುವ ಕೆಲಸದಲ್ಲಿ ತಿಪ್ಪಣ್ಣ ನಿರತರಾಗಿದ್ದರು. ಎಂದಿನಂತೆ ಬುಧವಾರವೂ ಕೆಲಸದಲ್ಲಿ ತೊಡಗಿದ್ದ ವೇಳೆ ಗೋಡೆ ಕುಸಿದಿದ್ದು, ಈ ವೇಳೆ ಕಾರ್ಮಿಕ ತಿಪ್ಪಣ್ಣ ಗಾಯಗೊಂಡಿದ್ದಾರೆ.

ADVERTISEMENT

ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪುರಸಭೆ ಸದಸ್ಯ ಸುನೀಲ ಪಾಟೀಲ, ರಮೇಶ ಕಲ್ಲೂರ್ ಅವರನ್ನು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.