ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಅಳವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನ ಬೇಸತ್ತು ಹೋಗಿದ್ದಾರೆ.
ರಾತ್ರಿ ಹೊಲಗಳಲ್ಲಿ ಕಟ್ಟಿರುವ ಜಾನುವಾರು, ಸೋಲಾರ ಬೇಲಿ ಬ್ಯಾಟರಿ, ಪ್ಲೇಟ್, ಟ್ರ್ಯಾಕ್ಟರ್‌ನ ಟ್ರಾಲಿ, ಪಂಪಸೆಟ್‌ಗಳನ್ನು ಕದ್ದೊಯ್ಯುತ್ತಿದ್ದು, ರೈತರಿಗೆ ಹಾನಿಯುಂಟು ಮಾಡುತ್ತಿದ್ದಾರೆ.
ಅಳವಾಯಿ ಗ್ರಾಮದ ರೋಹಿದಾಸ ಅಟೋಮೊಬೈಲ್‌ನಲ್ಲಿ ಮೊಬೈಲ್, ಗ್ರಾಮದಲ್ಲಿರುವ ಮಾಧವ ಕೊಠಮಾಳೆ ಹಾಗೂ ನರಸಿಂಗ ಶಿಂಧೆ ಎಂಬುವವರಿಗೆ ಸೇರಿದ ಎರಡೂ ದಾಬಾಗಳಲ್ಲಿ ಸುಮಾರು ₹1.80 ಲಕ್ಷ ಮೌಲ್ಯದ ಸಾಮಗ್ರಿ, ಎಲ್ಲಮವಾಡಿ ಗ್ರಾಮದ ಮಾಧವ ಪಿನಾಟೆ ಅವರ ಟ್ರ್ಯಾಕ್ಟರ್‌ನ ಟ್ರಾಲಿ, ದೇವಿದಾಸ ಗುರ್ಮೆ ಅವರ ಭಾವಿಯಲ್ಲಿನ ಮೋಟಾರ್, ಪ್ರಭಾಕರ ಪಾಂಚಾಳ ಅವರ ಕೇಬಲ್ ವೈಯರ್ ಸೇರಿ ಹಲವು ಮೌಲ್ಯದ ವಸ್ತುಗಳು ಕಳುವಾಗಿದ್ದು ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.
‘ಕೂಡಲೆ ಪೊಲೀಸರು ಕಾರ್ಯಪ್ರವೃತ್ತರಾಗಬೇಕು. ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಬೇಕು. ರೈತರ ಜಾನುವಾರು, ಪಂಪಸೆಟ್ ಮತ್ತಿತರ ಪರಿಕರಗಳನ್ನು ಜಪ್ತಿ ಮಾಡಿ ರೈತರಿಗೆ ಮರಳಿಸಬೇಕು’ ಎಂದು ಅಳವಾಯಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.