ADVERTISEMENT

ಬೀದರ್ | ಕೋವಿಡ್‍-19: ಮತ್ತಿಬ್ಬರು ಸಾವು

411ಕ್ಕೆ ತಲುಪಿದ ವೈರಾಣು ಪೀಡಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 16:52 IST
Last Updated 19 ಜೂನ್ 2020, 16:52 IST

ಬೀದರ್: ಕೋವಿಡ್ 19 ಸೋಂಕು ಜಿಲ್ಲೆಯಲ್ಲಿ ಮತ್ತೆ ಇಬ್ಬರನ್ನು ಬಲಿ ತೆಗೆದುಕೊಂಡಿದೆ.

ಬಸವಕಲ್ಯಾಣದ ಧಾರಾಗಿರಿ ಓಣಿಯ 70 ವರ್ಷದ ವ್ಯಕ್ತಿ ಹಾಗೂ ಜಿಲ್ಲೆಯ 45 ವರ್ಷದ ವ್ಯಕ್ತಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ.

70 ವರ್ಷದ ವ್ಯಕ್ತಿ ಜೂನ್ 12 ರಂದು ಮೃತಪಟ್ಟಿದ್ದು, ಶುಕ್ರವಾರ ಕೋವಿಡ್ 19 ವರದಿ ಪಾಸಿಟಿವ್ ಬಂದಿದೆ. ತೆಲಂಗಾಣದ ಹೈದರಾಬಾದ್‍ಗೆ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿರುವ 45 ವರ್ಷದ ವ್ಯಕ್ತಿಯನ್ನು ಜ್ವರ ಮತ್ತು ಉಸಿರಾಟದ ತೊಂದರೆ ಕಾರಣಕ್ಕೆ ಜೂನ್ 13ರಂದು ಬೀದರ್‌ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಗುರುವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 11ಕ್ಕೆ ಏರಿದೆ.

ADVERTISEMENT

ಮತ್ತೆ 10 ಮಂದಿಗೆ ಸೋಂಕು: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 10 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೋವಿಡ್ ವೈರಾಣು ಪೀಡಿತರ ಸಂಖ್ಯೆ 411ಕ್ಕೆ ಏರಿದೆ.

50 ವರ್ಷದ ಮಹಿಳೆ, 31, 40, 24, 49, 45, 45, 30, 28 ಹಾಗೂ 70 ವರ್ಷ ಪುರುಷರಿಗೆ ಸೋಂಕು ತಗುಲಿದೆ. ಇವರಲ್ಲಿ ಮೂವರು ತೆಲಂಗಾಣ ಹಾಗೂ ಇಬ್ಬರು ಮಹಾರಾಷ್ಟ್ರದಿಂದ ಹಿಂದಿರುಗಿದ್ದಾರೆ.

ಶುಕ್ರವಾರ ಗುಣಮುಖರಾದ ಮೂವರು ಬಿಡುಗಡೆ ಹೊಂದಿದ್ದಾರೆ.

ಈವರೆಗೆ ಒಟ್ಟು 254 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗಳಿಗೆ ತೆರಳಿದ್ದಾರೆ. ಗಂಟಲು ದ್ರವ ಮಾದರಿ ಪಡೆದ 2,658 ಜನರ ವೈದ್ಯಕೀಯ ವರದಿ ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.