ADVERTISEMENT

ಬಸವಕಲ್ಯಾಣ: ಅನಧಿಕೃತ ರಸಗೊಬ್ಬರ ಜಪ್ತಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 5:11 IST
Last Updated 24 ಜೂನ್ 2021, 5:11 IST
ಬಸವಕಲ್ಯಾಣ ತಾಲ್ಲೂಕಿನ ಮೋರಖಂಡಿಯಲ್ಲಿ‌ ಅನಧಿಕೃತವಾಗಿ ಮಾರಾಟ ಮಾಡುತಿದ್ದ ಗೊಬ್ಬರ ಬುಧವಾರ ಕೃಷಿ ಇಲಾಖೆಯಿಂದ ಜಪ್ತಿ ಮಾಡಿಕೊಳ್ಳಲಾಗಿದೆ
ಬಸವಕಲ್ಯಾಣ ತಾಲ್ಲೂಕಿನ ಮೋರಖಂಡಿಯಲ್ಲಿ‌ ಅನಧಿಕೃತವಾಗಿ ಮಾರಾಟ ಮಾಡುತಿದ್ದ ಗೊಬ್ಬರ ಬುಧವಾರ ಕೃಷಿ ಇಲಾಖೆಯಿಂದ ಜಪ್ತಿ ಮಾಡಿಕೊಳ್ಳಲಾಗಿದೆ   

ಬಸವಕಲ್ಯಾಣ: ತಾಲ್ಲೂಕಿನ ಮೋರಖಂಡಿಯಲ್ಲಿ ಬುಧವಾರ ಅನಧಿಕೃತವಾಗಿ ಸಂಗ್ರಹಿಸಿದ್ದ ₹3,20,000 ಮೌಲ್ಯದ ರಸಗೊಬ್ಬರ ಕೃಷಿ ಇಲಾಖೆಯಿಂದ ಜಪ್ತಿ ಮಾಡಿಕೊಳ್ಳಲಾಗಿದೆ.

ತಳಭೋಗ ಗ್ರಾಮದಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ₹43,000 ಮೌಲ್ಯದ ಕೀಟನಾಶಕ ವಶ ಪಡಿಸಿಕೊಳ್ಳಲಾಗಿದೆ.

ಜಾಗೃತ ದಳದವರಾದ ಜಂಟಿ ಕೃಷಿ‌ ನಿರ್ದೇಶಕಿ ತಾರಾಮಣಿ, ಕೃಷಿ ಇಲಾಖೆಯ ಸಹಾಯಕ‌ ನಿರ್ದೇಶಕ ಎಂ.ಜೆ.ಅನ್ಸಾರಿ, ವೀರಶೆಟ್ಟಿ ರಾಠೋಡ, ಮಾರ್ಥಂಡ, ಕೈಲಾಸನಾಥ ನೇತೃತ್ವದಲ್ಲಿ ದಾಳಿ ನಡೆಸಿ ಜಪ್ತಿ ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.