ADVERTISEMENT

ಮನ್ನಳ್ಳಿ ಪಿಎಚ್‍ಸಿ ಮೇಲ್ದರ್ಜೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 6 ಮೇ 2022, 15:32 IST
Last Updated 6 ಮೇ 2022, 15:32 IST
ಬಂಡೆಪ್ಪ ಕಾಶೆಂಪೂರ
ಬಂಡೆಪ್ಪ ಕಾಶೆಂಪೂರ   

ಬೀದರ್: ರಾಜ್ಯ ಸರ್ಕಾರವು ತಮ್ಮ ಮನವಿಗೆ ಸ್ಪಂದಿಸಿ ಮನ್ನಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಿ ಆದೇಶ ಹೊರಡಿಸಿದೆ ಎಂದು ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪೂರ ತಿಳಿಸಿದ್ದಾರೆ.
ಐದು ಎಕರೆ ಪ್ರದೇಶದಲ್ಲಿ ಇರುವ ಪಿಎಚ್‍ಸಿಯಲ್ಲಿ ಅಧಿಕ ಸಂಖ್ಯೆಯ ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಣ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಆರೋಗ್ಯ ಸಚಿವ ಸುಧಾಕರ ಅವರಿಗೆ ಪತ್ರ ಬರೆದಿದ್ದೆ. ಅನೇಕ ಬಾರಿ ಸರ್ಕಾರದ ಗಮನ ಸೆಳೆದಿದ್ದೆ ಎಂದು ಹೇಳಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೇಕಿರುವ ಅಗತ್ಯ ಸೌಕರ್ಯಗಳನ್ನು ಆದಷ್ಟು ಬೇಗ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಸಾಪ ಯುವ, ಮಹಿಳಾ ಘಟಕಕ್ಕೆ ನೇಮಕ

ಬೀದರ್: ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕ ಹಾಗೂ ಮಹಿಳಾ ಘಟಕಗಳ ತಾಲ್ಲೂಕು ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ.
ಯುವ ಘಟಕ: ಗುರುನಾಥ ರಾಜಗಿರಾ (ಬೀದರ್), ಅಂಬಾದಾಸ ನೇಳಗೆ (ಔರಾದ್), ಅಕ್ಷಯ ಸೋಮನಾಥ ಮುದ್ದಾ (ಭಾಲ್ಕಿ), ನಾಗೇಶ ಮೇತ್ರೆ (ಹುಲಸೂರು), ಗುರುಲಿಂಗಪ್ಪ ದೇಗಾವ (ಬಸವಕಲ್ಯಾಣ).
ಮಹಿಳಾ ಘಟಕ: ರೂಪಾ ಪಾಟೀಲ(ಬೀದರ್), ಮಹಾನಂದಾ ಎಂಡೆ (ಔರಾದ್), ರೇಖಾ ಕಾಡಾದಿ (ಹುಲಸೂರು), ನಾಗಮ್ಮ ಎಚ್. ಭುರೆ (ಬಸವಕಲ್ಯಾಣ) ಹಾಗೂ ಚಂದ್ರಕಲಾ ಡಿಗ್ಗಿ (ಭಾಲ್ಕಿ).
ಬರುವ ದಿನಗಳಲ್ಲಿ ಉಳಿದ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.