ADVERTISEMENT

ವಿಷ್ಣುವರ್ಧನ್ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 14:58 IST
Last Updated 18 ಸೆಪ್ಟೆಂಬರ್ 2021, 14:58 IST
ಬೀದರ್‌ನ ನೌಬಾದ್‍ನ ಜ್ಞಾನ ಶಿವಯೋಗ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಡಾ.ರಾಜಶೇಖರ ಶಿವಾಚಾರ್ಯ, ವೀರೇಶ ಸ್ವಾಮಿ, ಬಸವ ಮೂಲಗೆ, ಗುರುನಾಥ ರಾಜಗೀರಾ ಇದ್ದರು
ಬೀದರ್‌ನ ನೌಬಾದ್‍ನ ಜ್ಞಾನ ಶಿವಯೋಗ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಡಾ.ರಾಜಶೇಖರ ಶಿವಾಚಾರ್ಯ, ವೀರೇಶ ಸ್ವಾಮಿ, ಬಸವ ಮೂಲಗೆ, ಗುರುನಾಥ ರಾಜಗೀರಾ ಇದ್ದರು   

ಬೀದರ್: ವಿಷ್ಣು ಸೇನಾ ಸಮಿತಿಯಿಂದ ನಗರದ ನೌಬಾದ್‍ನ ಜ್ಞಾನ ಶಿವಯೋಗ ಆಶ್ರಮದಲ್ಲಿ ನಟ ವಿಷ್ಣುವರ್ಧನ್ ಅವರ 71ನೇ ಜನ್ಮದಿನ ಆಚರಿಸಲಾಯಿತು.

ವಿಷ್ಣುವರ್ಧನ್ ಅವರು ಚಿತ್ರರಂಗದ ಜತೆಗೆ ಕನ್ನಡ ಭಾಷೆ ಉಳಿಸಿ ಬೆಳೆಸಲು ಶ್ರಮಿಸಿದ್ದರು. ಯುವಜನತೆಗೆ ಆದರ್ಶವಾಗಿದ್ದ ಅವರು, ನುಡಿದಂತೆ ನಡೆದಿದ್ದರು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಬೇಮಳಖೇಡ ಹಿರೇಮಠ ಸಂಸ್ಥಾನದ ಡಾ. ರಾಜಶೇಖರ ಶಿವಾಚಾರ್ಯ ಅಭಿಪ್ರಾಯಪಟ್ಟರು.

ವಿಷ್ಣುವರ್ಧನ್ ಜೀವನ ಎಲ್ಲರಿಗೆ ಸ್ಫೂರ್ತಿಯಾಗಿದೆ ಎಂದು ಸಮಿತಿಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ವೀರೇಶ ಸ್ವಾಮಿ ಹೇಳಿದರು.

ADVERTISEMENT

ವಿಷ್ಣುವರ್ಧನ್ ಜೀವನ ಮತ್ತು ಸಾಧನೆ ಕುರಿತು ಯುವ ಮುಖಂಡ ಗುರುನಾಥ ರಾಜಗೀರಾ ಮಾತನಾಡಿದರು. ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಬಸವ ಮೂಲಗೆ, ಪದಾಧಿಕಾರಿಗಳಾದ ಪವನ್ ಮಡಿವಾಳ, ಸಿದ್ದು ಕಾಡೋದೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.