
ಬೀದರ್: ‘ಸ್ವಾಮಿ ವಿವೇಕಾನಂದರ ಬದುಕೇ ಎಲ್ಲರಿಗೂ ಸ್ಫೂರ್ತಿ’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ತಿಳಿಸಿದರು.
ನೌಬಾದಿನ ಶ್ರೀಗುರು ಗಂಗಾಧರ ಬಕ್ಕಪ್ರಭು ಚಾರಿಟಬಲ್ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿವೇಕಾನಂದರ ಪ್ರತಿಯೊಂದು ಮಾತು, ಅವರ ವಿಚಾರಗಳು ಬದುಕಿನಲ್ಲಿ ದೊಡ್ಡ ಬದಲಾವಣೆ ತರುವಂತಹ ಶಕ್ತಿ ಹೊಂದಿವೆ. ನಮ್ಮ ವಿವೇಕ ಹೆಚ್ಚಿಸುತ್ತವೆ ಎಂದರು.
ಗೋರಟಾ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಬಿಜೆಪಿ ಮುಖಂಡರಾದ ಈಶ್ವರ ಸಿಂಗ್ ಠಾಕೂರ್, ರಾಜಶೇಖರ ನಾಗಮೂರ್ತಿ, ಯಲ್ಲಾಲಿಂಗ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರೂಪೇಶ ಎಕಲಾರಕರ್, ಜನಸೇವಾ ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ ಜಲಾದೆ, ದೀಪಕ ಗಾದಗಿ, ಹಣಮಂತ ಬುಳ್ಳಾ, ವೀರು ದಿಗ್ವಾಲ್, ಸುನೀಲ ಗೌಳಿ ಮತ್ತಿತರರು ಪಾಲ್ಗೊಂಡಿದ್ದರು. ಟ್ರಸ್ಟ್ ಅಧ್ಯಕ್ಷ ಬಸವರಾಜ ಮೂಲಗೆ ನೌಬಾದ್ ಸ್ವಾಗತಿಸಿದರು. ಶಿವಕುಮಾರ ಚಿಮಕೋಡ ನಿರೂಪಿಸಿದರು. ಕಾರ್ಯದರ್ಶಿ ರಾಜ ಟಗರು ಆಣದೂರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.