ಜನವಾಡ (ಬೀದರ್ ತಾಲ್ಲೂಕು): ಕಾರ್ಖಾನೆ ತ್ಯಾಜ್ಯದಿಂದ ಕುಡಿಯುವ ನೀರು ಮಲೀನಗೊಂಡಿದೆ ಎನ್ನುವ ದೂರಿನ ಕಾರಣ ಪರಿಸರ ಹಾಗೂ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳ ತಂಡ ಬುಧವಾರ ಬೀದರ್ ತಾಲ್ಲೂಕಿನ ನೆಲವಾಡ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿತು.
ಜಲಮೂಲ ಕಲುಷಿತಗೊಂಡಿರುವ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಅಧಿಕಾರಿಗಳು, ಪರೀಕ್ಷೆಗೆ ನೀರಿನ ಸ್ಯಾಂಪಲ್ ತೆಗೆದುಕೊಂಡರು. ನೀರು ಕುಡಿಯಲು ಯೋಗ್ಯ ಅಥವಾ ಅಲ್ಲವೋ ಎನ್ನುವುದು ಪರೀಕ್ಷೆ ಬಳಿಕವೇ ಗೊತ್ತಾಗಲಿದೆ ಎಂದು ತಿಳಿಸಿದರು.
ಕಾರ್ಖಾನೆಯವರು ಕೃಷಿ ಹೊಂಡದಲ್ಲಿ ತ್ಯಾಜ್ಯ ಸುರಿದಿರುವುದರಿಂದ ಕೊಳವೆಬಾವಿ ನೀರು ಮಲೀನಗೊಂಡಿದೆ ಎಂದು ಗ್ರಾಮಸ್ಥರು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರ ಗಮನ ಸೆಳೆದಿದ್ದರು.
ಶಾಸಕರ ಸೂಚನೆ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಪರಿಸರ ಇಲಾಖೆಯ ಅಧಿಕಾರಿ ಸಂತೋಷಕುಮಾರ ನಾಟಿಕರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಪಾಟೀಲ, ಪಿಡಿಒ ಸಂತೋಷ ಸ್ವಾಮಿ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.