ಔರಾದ್: ತಾಲ್ಲೂಕಿನ ಸಂತಪೂರ ಹೋಬಳಿ ವ್ಯಾಪ್ತಿಯಲ್ಲಿ ಜೀರ್ಗಾ (ಕೆ) ಗ್ರಾಮಸ್ಥರಿಗೆ ಕಾಡು ಹಂದಿಗಳ ಕಾಟ ಜಾಸ್ತಿಯಾಗಿದೆ. ಗ್ರಾಮದ ಗುರಯ್ಯ ಸ್ವಾಮಿ ಅವರ ಹೊಲಕ್ಕೆ ಗುರುವಾರ ನುಗ್ಗಿದ ಕಾಡು ಹಂದಿಗಳ ದಂಡು ಒಂದು ಎಕರೆಗೂ ಜಾಸ್ತಿ ಜೋಳದ ಬೆಳೆ ನಾಶ ಮಾಡಿವೆ.
ಕಟಾವಿಗೆ ಬಂದ ಜೋಳದ ದಂಟು ನೆಲಕ್ಕೆ ಕೆಡವಿ ಹಾಳು ಮಾಡಿವೆ. ಮಳೆ ಕೊರತೆ ನಡುವೆ ಕಷ್ಟಪಟ್ಟು ನೀರು ಹರಿಸಿ ಜೋಳ ಬೆಳೆಸಿದ್ದೇವೆ. ಆದರೆ ಕಟಾವಿಗೆ ಮುನ್ನ ಹಾಳಾಗಿರುವುದು ನಮ್ಮ ಹೊಟ್ಟೆಗೆ ಹೊಡೆದಂತಾಗಿದೆ. ಈ ಬಾರಿ ಸೋಯಾಬಿನ್ ಹಾಗೂ ತೊಗರಿಗೆ ಸರಿಯಾದ ಬೆಲೆ ಸಿಗದೆ ಆರ್ಥಿಕ ಸಂಕಟ ಎದುರಾಗಿದೆ. ಈ ನಡುವೆ ನಿತ್ಯದ ಊಟಕ್ಕಾದರೂ ಒಂದಿಷ್ಟು ಅನುಕೂಲವಾಗುತ್ತದೆ ಎಂಬ ವಿಶ್ವಾಸದಲ್ಲಿರುವ ರೈತನಿಗೆ ಕಾಡು ಹಂದಿಗಳು ಆಘಾತ ನೀಡಿವೆ. ಹೊಲದಲ್ಲಿ ಬೆಳೆ ಚೆನ್ನಾಗಿ ಕಾಣಿಸಿದರೆ ಅವು ಬಂದು ಹಾಳು ಮಾಡುತ್ತವೆ ಎಂದು ಜೀರ್ಗಾ ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.