ADVERTISEMENT

ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ

ಗ್ರಾಮ ಪಂಚಾಯಿತಿ ನೂತನ ಸದಸ್ಯರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 6:45 IST
Last Updated 8 ಜನವರಿ 2021, 6:45 IST
ಔರಾದ್ ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಸಭಾಂಗಣದಲ್ಲಿ ಗುರುವಾರ ಔರಾದ್ ಮತ್ತು ಕಮಲನಗರ ತಾಲ್ಲೂಕಿನ ನೂತನ ಚುನಾಯಿತ ಗ್ರಾಪಂ ಸದಸ್ಯರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವ ಪ್ರಭು ಚವಾಣ್ ಮಾತನಾಡಿದರು
ಔರಾದ್ ಪಟ್ಟಣದ ಗುರುಪಾದಪ್ಪ ನಾಗಮಾರಪಳ್ಳಿ ಸಭಾಂಗಣದಲ್ಲಿ ಗುರುವಾರ ಔರಾದ್ ಮತ್ತು ಕಮಲನಗರ ತಾಲ್ಲೂಕಿನ ನೂತನ ಚುನಾಯಿತ ಗ್ರಾಪಂ ಸದಸ್ಯರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸಚಿವ ಪ್ರಭು ಚವಾಣ್ ಮಾತನಾಡಿದರು   

ಔರಾದ್: ‘ನೂತನ ಸದಸ್ಯರು ತಮ್ಮ ಅಧಿಕಾರ ಅವಧಿಯಲ್ಲಿ ಜನರ ಸಹಕಾರ ಪಡೆದು ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು. ಜನರ ಸಮಸ್ಯೆಗೆ ಸ್ಪಂದಿಸುವ ಮೂಲಕ ಉತ್ತಮವಾಗಿ ಕೆಲಸ ಮಾಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಹೇಳಿದರು.

ಇಲ್ಲಿನ ಗುರುಪಾದಪ್ಪ ನಾಗಮಾರಪಳ್ಳಿ ಸಭಾಂಗಣದಲ್ಲಿ ವಿಧಾನಸಭಾ ಮತಕ್ಷೇತ್ರದ ಔರಾದ್ ಮತ್ತು ಕಮಲನಗರ ತಾಲೂಕಿನಿಂದ ನೂತನವಾಗಿ ಆಯ್ಕೆಯಾದ ಗ್ರಾ.ಪಂ ಸದಸ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಗೋ ಪೂಜೆ ಮಾಡಿ, ಸಸಿ ನೆಟ್ಟು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

‘ಗ್ರಾ.ಪಂ ಚುನಾವಣೆಗಳಲ್ಲಿ ಜಯಶಾಲಿಗಳಾಗಿರುವ ಸದಸ್ಯರು ಆಂತರಿಕ ಮನಸ್ತಾಪ ಬದಿಗಿಟ್ಟು ಪಕ್ಷ ಭೇದ ತೊರೆದು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ಪಂಚಾಯಿತಿ ವತಿಯಿಂದ ದೊರಕುವ ಅನುದಾನಗಳನ್ನು ಸಮರ್ಪಕವಾಗಿ ಬಳಕೆಮಾಡಿಕೊಂಡು ಗ್ರಾಮ ಅಭಿವೃದ್ಧಿ ಸೌಲಭ್ಯ ಪ್ರತಿ ಮನೆ ಮನೆಗಳಿಗೆ ತಲುಪಿಸಬೇಕು’ ಎಂದು ಹೇಳಿದರು.

ADVERTISEMENT

‘ಬಿಜೆಪಿ ಸರ್ಕಾರದಿಂದ ಅನೇಕ ಜನಪರ ಕಾರ್ಯಗಳು ಅನುಷ್ಠಾನದಲ್ಲಿವೆ. ಕ್ಷೇತ್ರದ ಹಾಗೂ ಪ್ರತಿ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಿರುವುದರಿಂದ ಕಮಲನಗರ ಮತ್ತು ಔರಾದ್ ತಾಲ್ಲೂಕಿನ ಒಟ್ಟು 39 ಗ್ರಾ.ಪಂ ಗಳಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರೇ ಹೆಚ್ಚಿನ ಸಂಖ್ಯೆಯಲ್ಲಿ ವಿಜಯಶಾಲಿಯಾಗಿರುವುದು ಸಂತಸ ತಂದಿದೆ’ ಎಂದರು.

‘ಚುನಾಯಿತ ಸದಸ್ಯರು ಇಂದಿನಿಂದಲೇ ಕಾರ್ಯಪ್ರವರ್ತರಾಗಿ ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕು. ಇದಕ್ಕೆ ನನ್ನ ಸಹಕಾರ ಮತ್ತು ಜತೆಗೆ ಇನ್ನಿತರ ಪ್ರಗತಿಪರ ಕಾರ್ಯಗಳಿಗೆ ಮತ್ತಷ್ಟು ಅನುದಾನ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಶಿವಾನಂದ್ ಮಂಠಾಳ್‍ಕರ್, ಮುಖಂಡ ಸಿದ್ರಾಮ ಮಾತನಾಡಿದರು.

ಬಿಜೆಪಿ ಜಿಲ್ಲಾ ಘಟಕ ಉಪಾಧ್ಯಕ್ಷ ಹಾಗೂ ಗ್ರಾ.ಪಂ ಚುನಾವಣೆ ಜಿಲ್ಲಾ ಉಸ್ತುವಾರಿ ಪ್ರಕಾಶ ಟೋಣ್ಣೆ, ಗ್ರಾಮ ಪಂಚಾಯಿತಿ ಚುನಾವಣೆ ತಾಲ್ಲೂಕು ಘಟಕದ ಉಸ್ತುವಾರಿ ಬಂಡೆಪ್ಪ ಕಂಟೆ, ಮುಖಂಡ ವಿಜಯಕುಮಾರ್ ಪಾಟೀಲ ಗಾದಗಿ, ಕಿರಣ್ ಪಾಟೀಲ, ಬಿಜೆಪಿ ತಾಲ್ಲೂಕು ಘಟಕ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಅಶೋಕ ಹೋಕ್ರಾಣೆ, ಶಿವಾನಂದ ವಡ್ಡೆ, ಸುರೇಶ ಭೋಸ್ಲೆ, ಮಾರುತಿ ಚವಾಣ್, ಕಲ್ಲಪ್ಪ ಉಪ್ಪೆ, ವಸಂತ ಬಿರಾದರ್, ಶಿವಾಜಿರಾವ್ ಕಾಳೆ, ಅಂಬಿಕಾ ಪವಾರ್, ಸಂತೋಷ ಪೋಕಲವಾರ್, ಸಲ್ಲಾವುದ್ದಿನ್, ಈರಾರೆಡ್ಡಿ, ರಮೇಶ ಉಪಾಸೆ, ಸತೀಷ ಪಾಟೀಲ್, ರಮೆಶ ದೇವಕತ್ತೆ, ಶಕುಂತಲಾ, ಅಮೃತರಾವ್ ವಟಗೆ, ವಿಜಯಕುಮಾರ ಪಾಟೀಲ, ಬಂಟಿ ರಾಂಪೂರೆ, ವೆಂಕಟರಾವ್, ಉಮಾಕಾಂತ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.