ಬೀದರ್: ಮಂದಾರ ಕಲಾವಿದರ ವೇದಿಕೆ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಗಾಯನ ಕಾರ್ಯಕ್ರಮ ಮತ್ತು ಕಲಾ ಪ್ರದರ್ಶನ ನೌಬಾದ್‌ನ ಹೋಪ್ ವೆಲ್‍ನೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ವೇದಿಕೆ ಅಧ್ಯಕ್ಷ. ಎಂ.ಜಿ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅರವಿಂದ ಕುಲಕರ್ಣಿ, ಸಂಜೀವಕುಮಾರ ಸ್ವಾಮಿ, ಚನ್ನಬಸಪ್ಪ ನೌಬಾದೆ, ಆಶಾ ಮೇಶಕರ್, ಫಿಟ್‌ನೆಸ್ ಕೋಚ್ ಮೇಘಾ ತರನಳೆ, ರೇಣುಕಾ ಕಾಲೇಜಿನ ಪ್ರಾಚಾರ್ಯ ಅಶೋಕ ಬುದಿಹಾಳ, ಸಂಗ್ರಾಮ ಮಾನಕಾರೆ ಪಾಲ್ಗೊಂಡಿದ್ದರು.
ಸಂಗ್ರಾಮ ಮಾನಕಾರೆ ಸ್ವಾಗತಿಸಿದರು. ಸುರೇಖಾ ಚೊಂಡಿ ಸ್ವಾಗತ ಗೀತೆ ಹಾಡಿದರು. ಡ್ಯಾನಿಯಲ್ ಮೇತ್ರೆ ನಿರೂಪಿಸಿದರು.
ರಬೇಕಾ ಕರಡ್ಯಾಳ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.