
ಭಾಲ್ಕಿ: ‘ರಾಷ್ಟ್ರದ ಭವಿಷ್ಯ ಯುವಜನರ ಕೈಯಲ್ಲಿದ್ದು, ಸಂಸ್ಕಾರಯುತ, ಜವಾಬ್ದಾರಿಯುತ ಯುವಜನಾಂಗವೇ ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಕಾರಣವಾಗುತ್ತದೆ’ ಎಂದು ಶಿಕ್ಷಕ ಚಂದ್ರಕಾಂತ ತಳವಾಡೆ ಹೇಳಿದರು.
ತಾಲ್ಲೂಕಿನ ಮೊರಂಬಿ ಗ್ರಾಮದಲ್ಲಿ ನಡೆದ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಯುವ ಸಮಾವೇಶ ಮತ್ತು ರೈತ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಯುವಕರು ಸಂಸ್ಕಾರಯುತ ಬದುಕನ್ನು ಅಳವಡಿಸಿಕೊಂಡರೆ ಬಲಿಷ್ಠ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಸಂಸ್ಕಾರ, ಶಿಸ್ತು, ಶ್ರದ್ಧೆ ಮತ್ತು ಸೇವಾಭಾವವೇ ಯುವಜನರ ಬದುಕಿನ ಮೂಲ ಮೌಲ್ಯಗಳಾಗಬೇಕು’ ಎಂದು ತಿಳಿಸಿದರು.
ತಹಶೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ‘ಯುವಕರು ಶಿಕ್ಷಣ, ಕೃಷಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಭಿವೃದ್ಧಿಯತ್ತ ಸಾಗಬೇಕು’ ಎಂದು ಹೇಳಿದರು.
ಶಾಂತವೀರ ಶಿವಾಚಾರ್ಯರು, ಲೋಕೇಶ ಗುರೂಜಿ ಆಶೀರ್ವಚನ ನೀಡಿದರು. ಯುವಕರು, ರೈತರು ಸೇರಿ ಅನೇಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.