ADVERTISEMENT

ಭಾಲ್ಕಿ: ಹಾಳಾದ ಭಾವಚಿತ್ರಗಳ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 16:22 IST
Last Updated 2 ಆಗಸ್ಟ್ 2020, 16:22 IST
ಭಾಲ್ಕಿಯ ಹೊರ ವಲಯದಲ್ಲಿ ಹಾಳಾದ ದೇವರ ಭಾವಚಿತ್ರಗಳನ್ನು ಬೇರ್ಪಡಿಸುತ್ತಿರುವ ಯುವ ಬ್ರಿಗೇಡ್‌ ಸದಸ್ಯರು
ಭಾಲ್ಕಿಯ ಹೊರ ವಲಯದಲ್ಲಿ ಹಾಳಾದ ದೇವರ ಭಾವಚಿತ್ರಗಳನ್ನು ಬೇರ್ಪಡಿಸುತ್ತಿರುವ ಯುವ ಬ್ರಿಗೇಡ್‌ ಸದಸ್ಯರು   

ಭಾಲ್ಕಿ: ಪಟ್ಟಣದಲ್ಲಿ ಭಾನುವಾರ ಯುವ ಬ್ರಿಗೇಡ್ ಸದಸ್ಯರು ಭಾಲ್ಕೇಶ್ವರ ಮಂದಿರ, ಸಾಯಿ ಮಂದಿರ, ಕುಂಭೇಶ್ವರ, ಸಂಗಮೇಶ್ವರ ಹಾಗೂ ಹನುಮಾನ ಮಂದಿರದಲ್ಲಿ, ಅಕ್ಕಪಕ್ಕ ಬೀಸಾಡಿದ ಹಾಳಾದ ದೇವರ ಭಾವಚಿತ್ರಗಳನ್ನು ಸಂಗ್ರಹಿಸಿ ಸೂಕ್ತ ವಿಲೇವಾರಿ ಮಾಡುವುದರ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.

ಕಣ ಕಣದಲ್ಲೂ ಶಿವ ಎಂಬ ಕಾರ್ಯಕ್ರಮದಡಿ ಎಲ್ಲೆಂದರಲ್ಲಿ ಬಿಸಾಡಿದ ಫೋಟೋಗಳನ್ನು ಸೂಕ್ತ ವಿಲೇವಾರಿ ಮಾಡಿ, ಅಲ್ಲಿ ಒಂದು ಸಸಿ ನೆಟ್ಟು ಅದರಲ್ಲಿಯೇ ಶಿವನನ್ನು ಕಾಣುವ ನಿಜವಾದ ಸಾಮಾಜಿಕ ಕಳಕಳಿ ಇಟ್ಟುಕೊಂಡಿದೆ.

ಯುವ ಬ್ರಿಗೇಡ್ ಪ್ರಮುಖ ಸಂಗಮೇಶ ಮೈನಾಳೆ ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.