ADVERTISEMENT

ಅನ್ನ, ವಸ್ತ್ರದಾನಗೈದು ಯುಗಾದಿ ಆಚರಣೆ

ವಾತಡೆ ಫೌಂಡೇಶನ್ ವತಿಯಿಂದ ವಿಶಿಷ್ಟ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 3:29 IST
Last Updated 4 ಏಪ್ರಿಲ್ 2022, 3:29 IST
ಬಸವಕಲ್ಯಾಣದಲ್ಲಿ ಶನಿವಾರ ಯುಗಾದಿ ಹಬ್ಬದ ಪ್ರಯುಕ್ತ ವಾತಡೆ ಫೌಂಡೇಶನ್ ವತಿಯಿಂದ ಪೌರ ಕಾರ್ಮಿಕರಿಗೆ ಬಟ್ಟೆ, ಸೀರೆ ವಿತರಿಸಲಾಯಿತು. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಪ್ರದೀಪ ವಾತಡೆ ಪಾಲ್ಗೊಂಡಿದ್ದರು
ಬಸವಕಲ್ಯಾಣದಲ್ಲಿ ಶನಿವಾರ ಯುಗಾದಿ ಹಬ್ಬದ ಪ್ರಯುಕ್ತ ವಾತಡೆ ಫೌಂಡೇಶನ್ ವತಿಯಿಂದ ಪೌರ ಕಾರ್ಮಿಕರಿಗೆ ಬಟ್ಟೆ, ಸೀರೆ ವಿತರಿಸಲಾಯಿತು. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಪ್ರದೀಪ ವಾತಡೆ ಪಾಲ್ಗೊಂಡಿದ್ದರು   

ಬಸವಕಲ್ಯಾಣ: ವಾತಡೆ ಫೌಂಡೇಶನ್ ವತಿಯಿಂದ ನಗರದ ಕಾಳಿಗಲ್ಲಿಯ ಹನುಮಾನ ದೇವಸ್ಥಾನದ ಆವರಣದಲ್ಲಿ ಶನಿವಾರ ಪೌರ ಕಾರ್ಮಿಕರಿಗೆ ಸೀರೆ, ಬಟ್ಟೆ ವಿತರಿಸಿ ಹಾಗೂ ಓಣಿ ನಿವಾಸಿಗಳಿಗೆ ಅನ್ನದಾನಗೈದು ಯುಗಾದಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

ಫೌಂಡೇಶನ್ ಅಧ್ಯಕ್ಷ ಪ್ರದೀಪ ವಾತಡೆ ಬಟ್ಟೆ ವಿತರಿಸಿದರು.

ನಂತರ ನೇತೃತ್ವ ವಹಿಸಿದ್ದ ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ,‘ಗುರು ಬಸವಣ್ಣನವರು ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿದ್ದರು. ಅನ್ನ, ವಸ್ತ್ರದಾನ ಮಾಡಿದರೆ ಅವರ ಬಸವತತ್ವವನ್ನು ಪಾಲಿಸಿದಂತೆ’ ಎಂದರು.

ADVERTISEMENT

‘ಹುಟ್ಟುವಾಗ ಅನೇಕರು ಬಡ ಕುಟುಂಬದಲ್ಲಿ ಜನ್ಮ ಪಡೆಯುತ್ತಾರೆ. ಆದರೆ, ಸಾಯುವಾಗ ಸಿರಿವಂತರಾಗಿ ಸಾಯಬೇಕು. ಜೀವನದಲ್ಲಿ ಗಳಿಸಿದರಲ್ಲಿ ಕೆಲ ಭಾಗವನ್ನು ಬಡವರಿಗೆ, ದುರ್ಬಲರಿಗೆ ದಾನ ನೀಡಬೇಕು. ಕೆಲವರಿಗೆ ಭಗವಂತನು ಸಾಕಷ್ಟು ಕೊಟ್ಟಿದ್ದರೂ ಅನ್ಯರಿಗೆ ಕೊಡುವ ಮನಸ್ಸು ಇರುವುದಿಲ್ಲ. ವಾತಡೆ ಅವರಿಂದ ಪೌರ ಕಾರ್ಮಿಕರನ್ನು ಸನ್ಮಾನಿಸಿ ಬಟ್ಟೆ ನೀಡುತ್ತಿರುವುದು ಉತ್ತಮ ಕಾರ್ಯ. ಕಾರ್ಮಿಕರು ಸ್ವಚ್ಛತೆ ಕೈಗೊಳ್ಳುವುದರಿಂದಲೇ ಜನರೆಲ್ಲ ಆರೋಗ್ಯವಂತರಾಗಿ ಇರುತ್ತಾರೆ’ ಎಂದರು.

ಪ್ರದೀಪ ವಾತಡೆ ಮಾತನಾಡಿ,‘ಪೌರ ಕಾರ್ಮಿಕರದ್ದು ಸ್ವಚ್ಛತೆ ಕೈಗೊಳ್ಳುವ ಸತ್ಯ ಶುದ್ಧ ಕಾಯಕವಾಗಿದೆ. ಇಂಥವರಿಗೆ ಸಹಾಯ, ಸಹಕಾರ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ’ ಎಂದರು.ನಗರಸಭೆ ಸದಸ್ಯೆ ಶಾಂತಮ್ಮ ಲಾಡೆ, ಮುಖಂಡ ಅಮರ ಬಡದಾಳೆ, ಹಿರಿಯರಾದ, ರೇವಣಪ್ಪ ವಾಂಜರಖೇಡೆ, ಸೂರ್ಯಕಾಂತ ಮಠ, ಬಸವರಾಜ ನೇತೆ, ಮಲ್ಲಿಕಾರ್ಜುನ ಆಗ್ರೆ, ವಿಶಾಲ ಸಂಡೆ, ಸಂದೀಪ ಸಂಡೆ, ಮಲ್ಲಿಕಾರ್ಜುನ ಸಕ್ಕರಬಾವಿ, ನೀಲಕಂಠ, ಗಂಗಾಧರ, ಶ್ರೀಶೈಲ್ ವಾತಡೆ, ಶಿವಾನಂದ, ರವಿ ಬುಡಗೆ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.