ADVERTISEMENT

ಅಭ್ಯರ್ಥಿಗಳಿಂದ ಬಿರುಸುಗೊಂಡ ಪ್ರಚಾರ

ಜಿಲ್ಲೆಯಲ್ಲಿ ರಂಗೇರುತ್ತಿರುವ ಚುನಾವಣಾ ಕಣ, ವಿಜಯೇಂದ್ರ ಮಿಂಚಿನ ಸಂಚಾರ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 6:34 IST
Last Updated 29 ಏಪ್ರಿಲ್ 2018, 6:34 IST

ಚಾಮರಾಜನಗರ: ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಮತ ಪ್ರಚಾರ ಕಾರ್ಯ ಬಿರುಸುಗೊಂಡಿದೆ.

ತಾಲ್ಲೂಕಿನ ಕಾಗಲವಾಡಿ ಮತ್ತು ಜ್ಯೋತಿಗೌಡನಪುರ ಗ್ರಾಮಗಳಲ್ಲಿ ಶನಿವಾರ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಬೆಂಬಲಿಗರೊಂದಿಗೆ ಮತ ಪ್ರಚಾರ ನಡೆಸಿದರು.

ಬಳಿಕ ಮಾತನಾಡಿದ ಅವರು, ‘ನಿಷ್ಠೆ ಮತ್ತು ಪ್ರಾಮಾಣಿಕವಾಗಿ 10 ವರ್ಷಗಳಿಂದ ಜನಸೇವೆ ಮಾಡಿಕೊಂಡು ಬಂದಿದ್ದೇನೆ. ಮುಂದಿನ ಬಾರಿಯೂ ತಮ್ಮ ಸೇವೆ ಮಾಡಲು ನನಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಮತಪ್ರಚಾರದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಪಿ.ಸದಾಶಿವಮೂರ್ತಿ, ಬಿಸಿಸಿ ಸದಸ್ಯ ನಾಗಯ್ಯ, ಮುಖಂಡರಾದ ಕಾಗಲವಾಡಿ ಚಂದ್ರು, ಸುಬ್ಬನಾಯ್ಕ, ಸೋಮೇಶ್ವರ್, ನಾರಾಯಣಸ್ವಾಮಿ, ಸಿದ್ದನಾಯಕ, ಮಲ್ಲನಾಯ್ಕ, ಜಿ.ಎಂ.ನಂಜುಂಡನಾಯಕ, ಮಹದೇವ ನಾಯಕ, ಪುಟ್ಟರಂಗ ನಾಯಕ, ಬೋರಯ್ಯ, ನಂಜುಂಡಸ್ವಾಮಿ, ಕಾವೇರಿ ಶಿವಕುಮಾರ್, ಸೋಮನಾಯಕ, ಸುರೇಶ್ ನಾಯಕ ಇದ್ದರು.

ಕನ್ನಡ ಚಳವಳಿ ವಾಟಾಳ್ ಪಕ್ಷ: ನಗರದ ಚಾಮರಾಜೇಶ್ವರಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್‌ ನಾಗರಾಜ್‌ ಅವರು ಪುತ್ರಿ ಅನುಪಮಾ, ಮಗ ಮಹದೇವಪ್ರಸಾದ್, ಮೊಮ್ಮಗ ಚಂದನ್ ಅವರೊಂದಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

ಬಳಿಕ, ರಥದ ಬೀದಿಯಲ್ಲಿರುವ ಕನ್ನಡ ಚಳವಳಿ ವಾಟಾಳ್ ಪಕ್ಷದ ಕಚೇರಿ ಉದ್ಘಾಟಿಸಿ, ತೆರೆದ ವಾಹನದಲ್ಲಿ ತ್ಯಾಗರಾಜ ರಸ್ತೆ, ಶ್ರೀಭುವನೇಶ್ವರಿ ವೃತ್ತ, ಡಿವಿಯೇಷನ್ ರಸ್ತೆ, ಸಂತೇಮರಹಳ್ಳಿ ರಸ್ತೆ, ಉಪ್ಪಾರ ಬೀದಿ, ರೈಲ್ವೆ ಬಡಾವಣೆ, ನಂಜನಗೂಡು ರಸ್ತೆ, ಸಂಪಿಗೆ ರಸ್ತೆ, ಹಳೇ ಬಸ್ ನಿಲ್ದಾಣ ರಸ್ತೆ, ಖಾಸಗಿ ಬಸ್ ನಿಲ್ದಾಣದ ರಸ್ತೆ, ಆರ್‌ಟಿಓ ಕಚೇರಿ ರಸ್ತೆ, ಗುಂಡ್ಲುಪೇಟೆ ವೃತ್ತ, ಅನ್ವರ್ ಪಾಷ ವೃತ್ತ, ವಾಣಿಯರ್‌ ರಸ್ತೆ ಸೇರಿದಂತೆ ನಗರದ ವಿವಿಧೆಡೆ ಸಂಚರಿಸಿ ಮತಯಾಚಿಸಿದರು.

ಮುಖಂಡರಾದ ದಳಪತಿ ವೀರತಪ್ಪ, ಸಿ.ಜಿ.ನಾಗೇಶ್, ಸುರೇಶ್‍ನಾಗ್, ನಾಗರಾಜ್‍ಮೂರ್ತಿ, ಕೆಂಪಣ್ಣ, ಶ್ರೀನಿವಾಸಗೌಡ, ಶಾ.ಮುರುಳಿ, ನಾಗರಾಜನಾಯಕ, ರಾಜುನಾಯಕ, ರಾಜು, ರಾಜಾಗೋಪಾಲ, ಚಿನ್ನನಾಯಕ, ಪುರುಷೋತ್ತಮ್, ವರದರಾಜು, ಮಹದೇವಪ್ಪ, ಚಿನ್ನನಾಯಕ, ಕುಮಾರ್, ಶಿವಕುಮಾರ, ಮಾಜಿ ನಗರಸಭಾ ಸದಸ್ಯ ನಿಂಗರಾಜು, ಚಿಕ್ಕಅಂಕಶೆಟ್ಟಿ, ರೇವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.