ADVERTISEMENT

ಎಲ್‌ಐಸಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 9:40 IST
Last Updated 20 ಜನವರಿ 2011, 9:40 IST

ಚಾಮರಾಜನಗರ: ಜೀವವಿಮಾ ನಿಗಮದ ಖಾಸಗೀಕರಣ ವಿರೋಧಿಸಿ ನಗರ ಶಾಖೆಯ ನೌಕರರು ಸಾರ್ವಜನಿಕ ವಲಯ ವಿಮಾ ಉದ್ದಿಮೆ ರಕ್ಷಣಾ ದಿನಾಚರಣೆಯನ್ನಾಗಿ ಬುಧವಾರ ಆಚರಿಸಿದರು.

ಈ ಸಂದರ್ಭದಲ್ಲಿ ವಿಮಾ ನೌಕರರ ಸಂಘದ ನಗರ ಶಾಲೆಯ ಪ್ರಧಾನ ಕಾರ್ಯದರ್ಶಿ ಎಂ.ಈಶ್ವರ್ ಮಾತ ನಾಡಿ, ಸಂಸತ್ತಿನ ಸ್ಥಾಯಿ ಸಮಿತಿಗೆ ಮಸೂದೆ ಕಳುಹಿಸಲಾಗಿತ್ತು. ಅಖಿಲ ಭಾರತ ವಿಮಾ ನೌಕರರ ಸಂಘ ಈ ಮಸೂದೆಯಲ್ಲಿ ಅಡಕವಾಗಿರುವ ಅಪಾಯಕಾರಿ ಅಂಶಗಳ ಬಗ್ಗೆ ಸ್ಥಾಯಿ ಸಮಿತಿಯ ಮುಂದೆ ಹಾಜರಾಗಿ ವಿವರಣೆ ನೀಡಿತ್ತು. ಮಸೂದೆ  ಕೆಲವು ಅಂಶಗಳನ್ನು ಪುನರ್ ಪರಿಶೀಲಿ ಸುವಂತೆ ಸ್ಥಾಯಿ ಸಮಿತಿಯು ಸರ್ಕಾರಕ್ಕೆ ಒಮ್ಮತದ ಶಿಫಾರಸ್ಸು ಮಾಡಿದೆ ಎಂದು ತಿಳಿಸಿದರು.

ನವ ಉದಾರೀಕರಣದ ವ್ಯಾಮೋಹ ಹೊಂದಿರುವ ಕೇಂದ್ರ ಸರ್ಕಾರ ವಿದೇಶಿ ನೇರ ಬಂಡವಾಳ ಮಿತಿ ಹೆಚ್ಚಿಸುವ ಬಗ್ಗೆ ಹೇಳುತ್ತಲೇ ಇದೆ. ಅಷ್ಟೇ ಅಲ್ಲದೆ ಎಲ್‌ಐಸಿ  ಖಾಸಗೀಕರಣದ ಮಸೂದೆಯನ್ನು ಯುಪಿಎ ಸರ್ಕಾರವು ಮಂಡಿಸಿರುವ ಸಿದ್ಧತೆ ನಡೆಸಿದೆ. ಸಂಸತ್ತಿನ ಸ್ಥಾಯಿ ಸಮಿತಿಯು ಈ ಮಸೂದೆಯನ್ನು ಪರಿಶೀಲಿಸುತ್ತಿದ್ದು, ಅಖಿಲ ಭಾರತ ವಿಮಾ ನೌಕರರ ಸಂಘವು ಸಮಿತಿಯ ಮುಂದೆ ಹಾಜರಾಗಿ ತನ್ನ ನಿಲುವು ವ್ಯಕ್ತಪಡಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಗುರುಸಿದ್ದಯ್ಯ, ನಾಗರಾಜು, ಸತ್ಯ ನಾರಾಯಣ, ವೆಂಕಟರಾಜು, ಕಮಲೇಶರಾವ್, ಚಂದ್ರಶೇಖರ್, ಬಿ.ವಿ.ಪ್ರಕಾಶ್, ನಾಗರಾಜು, ರಫೀಕ್ ಅಹಮದ್, ಪದ್ಮಾವತಿ, ಚಿನ್ನಮ್ಮ, ನಾಗೇಂದ್ರ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.