ADVERTISEMENT

ಚುನಾವಣೆ ವ್ಯವಸ್ಥೆ ಬದಲಾಗಲಿ: ವಾಟಾಳ್

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:15 IST
Last Updated 9 ಅಕ್ಟೋಬರ್ 2012, 9:15 IST

ಚಾಮರಾಜನಗರ: ಚಾಮರಾಜನಗರಕ್ಕೆ ಕಾವೇರಿ ನೀರು ತಂದರೂ ಕೂಡ ನನ್ನನ್ನು ಸೋಲಿದ್ದು ಯಾಕೆ? ಎಂದು ಇದುವರೆವಿಗೂ ನನಗೆ ಅರ್ಥವಾಗಿಲ್ಲ. ಚುನಾವಣೆ ವ್ಯವಸ್ಥೆಗೆ ಸಂಪೂರ್ಣ ಬದಲಾವಣೆ ತರುವ ಅಗತ್ಯ ಇದೆ ಎಂದು ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಭಾನುವಾರ ಅಭಿಪ್ರಾಯಪಟ್ಟರು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಯ.ದೊಡ್ಡಯ್ಯ ದತ್ತಿ ಸಾಹಿತ್ಯ ಉಪನ್ಯಾಸದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಳೆದ ಐದು ದಶಕಗಳಿಂದ ರಾಜಕಾರಣ ಮಾಡುತ್ತಾ, ನಿರಂತರವಾಗಿ ಕನ್ನಡಕ್ಕಾಗಿ ಹೋರಾಟ ಮಾಡಿ ಬೂಟಿನೇಟು ತಿಂದು ಜೈಲು ಕೂಡ ಸೇರಿದ್ದೇನೆ ಎಂದು ತಮ್ಮ ಹೋರಾಟವನ್ನು ಮೆಲುಕು ಹಾಕಿದರು.

ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ಮಾತನಾಡಿ, ಕರ್ನಾಟಕಕ್ಕೂ ಪ್ರಾದೇಶಿಕ ಪಕ್ಷ ಆಡಳಿತಕ್ಕೆ ಬಂದು ಅಧಿಕಾರ ಹಿಡಿಯುವವರೆವಿಗೂ ಕಾವೇರಿಯಂತಹ ಸಮಸ್ಯೆಗಳು ಬಗೆ ಹರಿಯುವುದಿಲ್ಲ. ಕುವೆಂಪು, ಡಾ.ರಾಜ್‌ಕುಮಾರ್, ವಾಟಾಳ್ ನಾಗರಾಜ್ ನಾಡಿನ ಮೂರು ರತ್ನಗಳಿದ್ದಂತೆ ಎಂದರು. ನೆಲ, ಜಲ ಭಾಷೆಗಾಗಿ ವಾಟಾಳರು ಕಳೆದ ದಶಕಗಳಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ಅಂತಹವರ ಸಂಖ್ಯೆ ಇನ್ನು ಹೆಚ್ಚಾಗಬೇಕಾಗಿದೆ ಎಂದು ಹೇಳಿದರು.

ವಾಟಾಳ್ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು, ಚಲನಚಿತ್ರ ನಿರ್ದೇಶಕ ಸಿ.ವಿ.ಶಿವಶಂಕರ್, ವೆಂಕಟರಮಣಸ್ವಾಮಿ, ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.