ADVERTISEMENT

ಜಿಲ್ಲೆಯಲ್ಲಿ ಶೇ 86.41 ಮತದಾನ

ವಿಧಾನಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರ: ಶಾಂತಿಯುತವಾಗಿ ನಡೆದ ಮತದಾನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 9:49 IST
Last Updated 9 ಜೂನ್ 2018, 9:49 IST

ಚಾಮರಾಜನಗರ: ವಿಧಾನಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಗಾಗಿ ಶುಕ್ರವಾರ ಶಾಂತಿಯುತ ಮತದಾನ ನಡೆಯಿತು. ಜಿಲ್ಲೆಯಾದ್ಯಂತ ದಾಖಲೆಯ ಶೇ 86.41ರಷ್ಟು ಮತದಾನವಾಗಿದೆ.

ಜಿಲ್ಲಾ ಕೇಂದ್ರ ಚಾಮರಾಜನಗರದ ತಾಲ್ಲೂಕು ಕಚೇರಿ ಸೇರಿದಂತೆ ಒಟ್ಟು ಐದು ಕಡೆಗಳಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಜಿಲ್ಲೆಯ 1,899 ಮತದಾರರ ಪೈಕಿ 1,641 ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಹನೂರಿನಲ್ಲಿ ಹೆಚ್ಚು: ಐದು ತಾಲ್ಲೂಕುಗಳ ಪೈಕಿ ಹನೂರಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಮತದಾನವಾಗಿದೆ. ಅಲ್ಲಿನ ಶೇ 90.40ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಉಳಿದಂತೆ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಶೇ 88.15, ಚಾಮರಾಜನಗರ ತಾಲ್ಲೂಕಿನಲ್ಲಿ ಶೇ 83.43, ಯಳಂದೂರು ತಾಲ್ಲೂಕಿನಲ್ಲಿ ಶೇ 83.43, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಶೇ 88.70ರಷ್ಟು ಮತದಾನವಾಗಿದೆ. ಜೂನ್ 12ರಂದು ಮತ ಎಣಿಕೆ ನಡೆಯಲಿದೆ.

ADVERTISEMENT

ಕೊಳ್ಳೇಗಾಲ: ಪಟ್ಟಣದಲ್ಲಿ ಶಾಂತಿಯುತ ಮತದಾನ ನಡೆಯಿತು. ಈ ವೇಳೆ ತಮ್ಮ ‍ಪಕ್ಷದ ಅಭ್ಯರ್ಥಿಗೆ ಮತ ಹಾಕುವಂತೆ ಮಾಜಿ ಶಾಸಕರಾದ ಎಸ್.ಜಯಣ್ಣ, ಜಿ.ಎನ್.ನಂಜುಂಡಸ್ವಾಮಿ, ಬಾಲರಾಜು, ಮುಖಂಡರಾದ ಮಂಜುನಾಥ್, ಸರ್ವೇಶ್‍ ಬಸವಯ್ಯ, ತೋಟೇಶ್, ಜಿ.ಪಿ. ಶಿವಕುಮಾರ್, ಚಾಮರಾಜು, ರವೀಂದ್ರ, ಬಿಎಸ್ಪಿ ವಕ್ತಾರ ಸಿದ್ದರಾಜು, ನಗರಸಭೆ ಸದಸ್ಯರಾದ ಪಿ.ಎಂ.ಕೃಷ್ಣಯ್ಯ, ರಾಮಕೃಷ್ಣ, ಮಳ್ಳವಳ್ಳಿ ಪುರಸಭಾ ಸದಸ್ಯ ಎಂ.ಎಸ್.ರಮೇಶ್, ಜಿಲ್ಲಾ ಯುವ ಕಾರ್ಯದರ್ಶೀ ಸಮೀಷರೀಫ್ ಮತದಾರರನ್ನು ಮನವೊಲಿಸಿದರು.

ಯಳಂದೂರು: ಪಟ್ಟಣದಲ್ಲಿ ಶಾಂತಿಯುತ ಮತದಾನ ನಡೆಯಿತು.ತಾಲ್ಲೂಕಿನಲ್ಲಿ ಒಟ್ಟು 175 ಮತದಾರರಿದ್ದು, ಇದರಲ್ಲಿ 146 ಶಿಕ್ಷಕರು ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.